HEALTH TIPS

ಕೇರಳ ಶಾಲಾ ಕಲೋತ್ಸವ ಕೈಪಿಡಿ ಪರಿಷ್ಕರಿಸಲಾಗುವುದು: ಸಚಿವ ವಿ.ಶಿವನ್ ಕುಟ್ಟಿ: ಜಿಲ್ಲಾ ಕಲೋತ್ಸವ ಉದ್ಘಾಟಿಸಿ ಅಭಿಮತ



          ಕಾಸರಗೋಡು: ಕೇರಳ ಶಾಲಾ ಕಲೋತ್ಸವ ಕೈಪಿಡಿಯನ್ನು ಪರಿಷ್ಕರಿಸಲಾಗುವುದು ಎಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರೆ.
        ಚಾಯೋತ್ ಜಿಎಚ್‍ಎಸ್‍ಎಸ್‍ನಲ್ಲಿ ಆರಂಭಗೊಂಡ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲಾ ಉತ್ಸವವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
     ಹೊಸ ಕಾಲಕ್ಕೆ ತಕ್ಕಂತೆ ಕಲೋತ್ಸವ ಕೈಪಿಡಿಯನ್ನು ಪರಿಷ್ಕರಿಸಲಾಗುವುದು. ಮುಂದಿನ ವರ್ಷ ಪರಿಷ್ಕøತ ಕೈಪಿಡಿ ಆಧರಿಸಿ ಕಲಾ ಉತ್ಸವ ಆಯೋಜಿಸಲಾಗುವುದು. ಮೇಲ್ಮನವಿಗಳಿಲ್ಲದೆ ಸ್ಪರ್ಧೆಗಳನ್ನು ನಡೆಸಲು ನಾವು ಉಪಕ್ರಮವನ್ನು ತೆಗೆದುಕೊಳ್ಳಬೇಕು. ಸ್ಪರ್ಧೆಗಳು ಮಕ್ಕಳ ನಡುವೆ ಇರಬೇಕು. ಪೋಷಕರು ಮತ್ತು ಶಿಕ್ಷಕರು ಸ್ಪರ್ಧೆ ಅಥವಾ ಫಲಿತಾಂಶದಲ್ಲಿ ಹಸ್ತಕ್ಷೇಪ ಮಾಡಬಾರದು. ಸ್ಪರ್ಧೆಯ ಫಲಿತಾಂಶದ ವಿರುದ್ಧ ನ್ಯಾಯಾಲಯಗಳಿಂದ ಮೇಲ್ಮನವಿಗಳನ್ನು ತೆಗೆದುಕೊಳ್ಳುವ ಪ್ರವೃತ್ತಿಯನ್ನು ನಿಲ್ಲಿಸಬೇಕು. . ಎಲ್ಲ ಮಕ್ಕಳನ್ನು ಒಂದೇ ಮನಸ್ಸಿನಿಂದ ನೋಡಬೇಕು. ಅವರ ಯಶಸ್ಸಿನಿಂದ ಸಂತೋಷ ಪಡಬೇಕು ಎಮದರು.
         ಕಲೋತ್ಸವ ಫಲಕ ನಿರ್ಧರಿಸುವ ವಿಧಾನವನ್ನು ಕಾಲಕಾಲಕ್ಕೆ ಮಾರ್ಪಡಿಸಲಾಗುವುದು. ಪ್ಯಾನೆಲ್‍ನಲ್ಲಿ ನಿಯಮಿತವಾಗಿ ಕೆಲವು ಜನರು ಇರುವುದನ್ನು ಮರುಪರಿಶೀಲಿಸುವ ಸಮಯ ಇದು. ಈ ಮೂಲಕ ಕಲೋತ್ಸವವನ್ನು ದೋಷರಹಿತವಾಗಿ ನಡೆಸಲು ಮಧ್ಯಸ್ಥಿಕೆ ವಹಿಸಲಾಗುವುದು. ಸ್ಪರ್ಧಾ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ನಡೆಸಬೇಕು. ಕಲಾ ಉತ್ಸವದ ವಿಜೇತರಿಗೆ ನೀಡುವ ಬಹುಮಾನದ ಮೊತ್ತವನ್ನು ಹೆಚ್ಚಿಸುವ ಚಿಂತನೆ ನಡೆದಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾ ಪ್ರತಿಭೆಗಳಿಗೆ ತರಬೇತಿ ನೀಡಲು ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಯೋಜನೆ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.



        ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕ ಸ್ಮರಣಿಕೆಯನ್ನು ಎನ್.ಎ.ನೆಲ್ಲಿಕುನ್ನು ಬಿಡುಗಡೆ ಮಾಡಿದರು. ಲೋಗೋ ವಿನ್ಯಾಸ ಮಾಡಿದವರಿಗೆ ಶಾಸಕ ಎಂ.ರಾಜಗೋಪಾಲನ್ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಸಿ.ಎಚ್.ಕುಞಂಬು ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸ್ವಾಗತಿಸಿದರು. ಮಾಜಿ ಎಂ.ಪಿ.. ಪಿಕರುಣಾಕರನ್, ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ. ಲಕ್ಷ್ಮಿ, ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯೇರ, ಕಿನಾನೂರು ಕರಿಂದಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಜಿಲ್ಲಾ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೊ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ಕಾಞಂಗಾಡು ನಗರಸಭೆ ಉಪಾಧ್ಯಕ್ಷ ವಿ.ವಿ. ರಮೇಶನ್, ಚಿತ್ರನಟ ಪಿ.ಪಿ.ಕುಂಞÂ ಕೃಷ್ಣನ್ ಮಾಸ್ಟರ್, ಚಾಯೋತ್ ಜಿ.ವಿ.ಎಚ್.ಎಸ್ ಪ್ರಾಂಶುಪಾಲ ಪಿ.ರವೀಂದ್ರನ್, ಸಾರ್ವಜನಿಕ ಪ್ರತಿನಿಧಿಗಳು, ಶಿಕ್ಷಣ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ವಾಸು ಸ್ವಾಗತಿಸಿ, ಸ್ವಾಗತ ಸಮಿತಿ ಸಂಚಾಲಕ ಯೂಸುಫ್ ಅಮತಾಳ ವಂದಿಸಿದರು.
           ಕಲೋತ್ಸವವು ನವೆಂಬರ್ 28 ರಿಂದ ಡಿಸೆಂಬರ್ 2 ರವರೆಗೆ ನಡೆಯಲಿದೆ. ಜಿಲ್ಲೆಯ 7 ಉಪ ಜಿಲ್ಲೆಗಳಿಂದ ಸುಮಾರು 5 ಸಾವಿರ ಕಲಾ ಪ್ರತಿಭೆಗಳು 300 ಸ್ಪರ್ಧೆಗಳಲ್ಲಿ 12 ಸ್ಥಳಗಳಲ್ಲಿ ಸ್ಪರ್ಧಿಸಲಿದ್ದಾರೆ.
        ಚಿತ್ತಾರಿಕಲ್ ಮೇಲ್ಪರಂಬ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಿದ್ಧಪಡಿಸಿದ ಸ್ವಾಗತ ಗೀತೆ ಮತ್ತು ನೃತ್ಯ ಶಿಲ್ಪವನ್ನು ಪ್ರದರ್ಶಿಸಲಾಯಿತು.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries