ಪೆರ್ಲ: ನಾವು ಕೃಷಿಯ ಕಡೆಗೆ ಯೋಜನೆಯ ಮೂಲಕ ತರಕಾರಿ ಅಭಿವೃದ್ಧಿ ಯೋಜನೆಗೆ ಸೇರ್ಪಡೆಗೊಂಡ ಉಕ್ಕಿನಡ್ಕ ವಿ.ಎ.ಎಲ್.ಪಿ ಶಾಲೆಯಲ್ಲಿ ಯೋಜನಾ ಆಧಾರಿತ ತರಕಾರಿ ಕೃಷಿಯನ್ನು ಉದ್ಘಾಟಿಸಲಾಯಿತು.
ಸುರಕ್ಷಿತ ಆಹಾರದ ಮೂಲಕ ಆರೋಗ್ಯಕರ ಸಮಾಜವನ್ನು ರೂಪಿಸಲು ಹಾಗೂ ಶಾಲಾ ಮಕ್ಕಳನ್ನು ಮತ್ತು ಸಮುದಾಯವನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಆಯೋಜಿಸಿದ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ ಎಸ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಉಪ ಕೃಷಿ ನಿರ್ದೇಶಕ ಪಿ.ರಾಘವೇಂದ್ರ, ಮಂಜೇಶ್ವರ ಸಹಾಯಕ ಕೃಷಿ ನಿರ್ದೇಶಕಿ ಅರ್ಜಿತಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಎಣ್ಮಕಜೆ ಗ್ರಾ.ಪಂ.ಕೃಷಿ ಭವನದ ನೇತೃತ್ವದಲ್ಲಿ ಉಕ್ಕಿನಡ್ಕ ಶಾಲೆಯಲ್ಲಿ ‘ನಾವು ಕೃಷಿಯ ಕಡೆಗೆ’ ಯೋಜನೆಗೆ ಚಾಲನೆ
0
ನವೆಂಬರ್ 29, 2022
Tags




.jpg)
