ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ವತಿಯಿಂದ ಭಾರತೀಯ ಸಂವಿಧಾನ ದಿನ ಆಚರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತೀಯ ಸಂವಿಧಾನದ ಮಹತ್ವ, ತಿದ್ದುಪಡಿಗಳು, ಷರತ್ತುಗಳು, ವಿಧಿ, ಲಕ್ಷಣಗಳು, ಭಾಗಗಳು ಹಾಗೂ ಇನ್ನಿತರ ಮಾಹಿತಿ ನೀಡಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಜಿತ್, ಕಾರ್ಯದರ್ಶಿಗಳಾದ ನವೀನ್ ರಾಜ್, ವಿನಾಯಕ, ಲಾವಣ್ಯ ಉಪಸ್ಥಿತರಿದ್ದರು. ಶೈಲಿ ಸ್ವಾಗತಿಸಿ,ಪ್ರಮೋದ್ ವಂದಿಸಿದರು.ಹಾರ್ದಿಕ್ ನಿರೂಪಿಸಿದರು.
ಪೆರ್ಲ ನಾಲಂದ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆ
0
ನವೆಂಬರ್ 29, 2022
Tags




.jpg)
