HEALTH TIPS

ಬಬಿಯಾ ಸ್ಮರಣಾರ್ಥ ಅಂಚೆ ಲಕೋಟೆ

 

              ಕಾಸರಗೋಡು: 'ದೇವರ ಮೊಸಳೆ' ಎಂದೇ ಹೆಸರಾಗಿದ್ದ ಇಲ್ಲಿನ ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಮೊಸಳೆ ಬಬಿಯಾ ಸ್ಮರಣಾರ್ಥ ಅಂಚೆ ಇಲಾಖೆಯು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ.

                ಈ ಲಕೋಟೆಯಲ್ಲಿ ಅನಂತಪುರದ ಸರೋವರ ದೇವಾಲಯ ಮತ್ತು ಬಬಿಯಾ ಚಿತ್ರಗಳಿವೆ.

ಹಿಂಬದಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ದೇವಾಲಯದ ಇತಿಹಾಸ ಮತ್ತು ಬಬಿಯಾ ಜೀವನಚರಿತ್ರೆ ಮುದ್ರಿಸಲಾಗಿದೆ. ಲಕೋಟೆಗೆ ₹10 ದರವಿದೆ.ದ್ದು, ಅಂಚೆ ಫಿಲಾಟಲಿಕ್ ಬ್ಯೂರೊಗಳಲ್ಲಿ ಖರೀದಿಗೆ ಲಭ್ಯವಿದೆ.

                    ಅನಾವರಣ: ಕುಂಬಳೆ ಅಂಚೆ ಕಚೇರಿಯಲ್ಲಿ ಮಲಬಾರ್ ದೇವಸ್ವ ಬೋರ್ಡ್(ಕೇರಳ ಮಜರಾಯಿ ಇಲಾಖೆ)ಯ ಕಾಸರಗೋಡು ವಿಭಾಗ ಅಧ್ಯಕ್ಷ ಕೊಟ್ಟಾರ ವಾಸುದೇವನ್ ಮತ್ತು ಕಾಸರಗೋಡು ಜಿಲ್ಲಾ ಅಂಚೆ ವರಿಷ್ಠಾಧಿಕಾರಿ ವಿ.ಶಾರದಾ ಅವರು ಈ ಲಕೋಟೆಯನ್ನು ಅನಾವರಣಗೊಳಿಸಿದರು. ಅನಂತಪುರ ದೇವಾಲಯ ಸಮಿತಿ ಅಧ್ಯಕ್ಷ ಉದಯಕುಮಾರ್ ಆರ್. ಗಟ್ಟಿ, ವ್ಯವಸ್ಥಾಪಕ ಲಕ್ಷ್ಮಣ ಹೆಬ್ಬಾರ್, ಗಣೇಶ್ ವಿ., ಡಾ.ಸೋಮೇಶ್ವರ ಗಟ್ಟಿ, ಪ್ರಿಯಾ, ಪಿ.ಆರ್.ಶೀಲಾ, ಪಿ.ಶಾಂತಾ ಕುಮಾರಿ ಇದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries