ಪತ್ತನಂತಿಟ್ಟ: ಈ ವರ್ಷದ ಶಬರಿಮಲೆ ಮಂಡಲಕಾಲ ಯಾತ್ರೆಗೆ ಕರ್ನಾಟಕದಿಂದ ಕೇರಳಕ್ಕೆ ಪ್ರಥಮ ಬಾರಿಗೆ ವಿಶೇಷ ರೈಲು ಮಂಜೂರಾಗಿದೆ.
ರೈಲ್ವೆ ಪ್ರಯಾಣಿಕರ ಸೌಕರ್ಯ ಸಮಿತಿ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕದ ವಿಜಯಪುರ ನಿಲ್ದಾಣದಿಂದ ಕೊಟ್ಟಾಯಂಗೆ ಸೇವೆಯು ನವೆಂಬರ್ 7 ರಿಂದ ಪ್ರಾರಂಭವಾಗಲಿದೆ. ಫೆಬ್ರವರಿ 1ರವರೆಗೆ ಸೇವೆ ಮುಂದುವರಿಯಲಿದೆ.
ರೈಲನ್ನು ಚೆಂಗನ್ನೂರು ವರೆಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ. ಇದಲ್ಲದೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಹಿಂದಿನ ವರ್ಷಗಳಂತೆಯೇ ವಿಶೇಷ ಸೇವೆಗಳು ಇರಲಿವೆ. ಯಾತ್ರೆಗೆ ಸಂಬಂಧಿಸಿದಂತೆ ಪ್ರತಿದಿನ ಎರಡು ವಿಶೇಷ ರೈಲುಗಳು ಸಂಚರಿಸಲಿವೆ. ಇದೇ ವೇಳೆ, ಚೆಂಗನ್ನೂರು-ಪಂಬಾ ಎಲಿವೇಟೆಡ್ ರೈಲ್ವೇಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಸಲ್ಲಿಸಲಾಗಿದೆ. ಆದರೆ ರೈಲ್ವೆ ಮಂಡಳಿ ಮಟ್ಟದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೃಷ್ಣದಾಸ್ ಹೇಳಿರುವರು.
ಶಬರಿಮಲೆ ಯಾತ್ರಾರ್ಥಿಗಳಿಗೆ ವಿಶೇಷ ರೈಲು; ಕರ್ನಾಟಕದಿಂದ ಕೇರಳಕ್ಕೆ ಪ್ರಥಮ ಬಾರಿಗೆ ವಿಶೇಷ ಸೇವೆ
0
ನವೆಂಬರ್ 04, 2022
Tags


