ಕಾಸರಗೋಡು: ಜಿಲ್ಲೆಯ ಕನ್ನಡಿಗರ ಹಿತರಕ್ಷಣೆಗಾಗಿ ಕೇರಳ ಸರ್ಕಾರ ಕನ್ನಡ ಅಕಾಡಮಿ ಸ್ಥಾಪನೆಗೆ ಮುಂದಾಗಬೇಕು ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ನಡೆದ ಕಾಸರಗೋಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೂಲನಿವಾಸಿ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದರ ಜತೆಗೆ ಕನ್ನಡಿಗರ ಅಸ್ತಿತ್ವ ಬಲಪಡಿಸಲು ಸರ್ಕಾರ ಪ್ರಯತ್ನಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾಮಾಜಿಕ ಮುಂದಾಳು, ವಕೀಲ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ, ಸಾಹಿತಿ ಹರ್ಷಾದ್ ವರ್ಕಾಡಿ ಅವರಿಗೆ ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಲ್ಪಾಡಿಯ ಸಾಮಾಜಿಕ, ಸಾಂಸ್ಕøತಿಕ ಧಾರ್ಮಿಕ ಕಾರ್ಯಕರ್ತೆ ಜಯಲಕ್ಷ್ಮೀ ಕಾರಂತ, ಕರ್ನಾಟಕ ಜಾನಪದ ಕಲಾ ಒಕ್ಕೂಟ ಅಧ್ಯಕ್ಷ ಕೆ. ನಾಗರಾಜ್, ಕರ್ನಾಟಕ ಬಯಲಾಟ ಅಕಾಡಮಿ ಸದಸ್ಯ ಸಿದ್ದಪ್ಪ ಬಿರಾದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅಭಿನಂದನ ಭಾಷಣ ಮಾಡಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜಾನಪದ ವೈಭವ, ಸುಗಮ ಸಂಗೀತ, ಬೊಂಬೆಯಾಟ ಜಾನಪದ ನೃತ್ಯವನ್ನು ಬೆಂಗಳೂರಿನ ಜಾನಪದ ವೈಭವ ತಂಡ ಪ್ರಸ್ತುತಪಡಿಸಿತು. ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ರಾಧಾಕೃಷ್ಣ ಉಳಿಯತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾವ್ಯಾಕುಶಲ, ಅಶ್ವಿನಿ ಗುರುಪ್ರಸಾದ್, ಲತಾಪ್ರಕಾಶ್, ವಿದುಷಿ ಕಾವ್ಯಾಭಟ್ ಪೆರ್ಲ, ದಿವಾಕರ ಪಿ. ಅಶೋಕನಗರ, ಶ್ರೀಕಾಂತ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಸಂದೇಶ್ ಕೋಟೆಕಣಿ ವಂದಿಸಿದರು.
ಕನ್ನಡ ಅಕಾಡಮಿ ಸ್ಥಾಪನೆಗೆ ಕೇರಳ ಸರ್ಕಾರ ಮುಂದಾಗಬೇಕು: ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್
0
ನವೆಂಬರ್ 08, 2022





