ಕಾಸರಗೋಡು: ರಾಜ್ಯಪಾಲ ಆರಿಫ್‍ಮಹಮ್ಮದ್ ಖಾನ್ ಅವರು ತಮ್ಮ ಸುದ್ದಿಗೋಷ್ಠಿಯಲ್ಲಿ ಎರಡು ಸುದ್ದಿ ವಾಹಿನಿಗಳನ್ನು ವಾರ್ತಾ ಸಂಗ್ರಹ ನಡೆಸದಂತೆ ನಿಷೇಧ ಹೇರಿದ ಕ್ರಮ ಖಂಡಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕಾಸರಗೋಡು ಪ್ರೆಸ್‍ಕ್ಲಬ್ ವಠಾರದಿಂದ ಆರಂಭಗೊಂಡ ಮೆರವಣೀಗೆ ನಗರದ ವಿವಿಧೆಡೆ ಸಂಚರಿಸಿ ಮುಖ್ಯ ಅಂಚೆ ಕಚೇರಿ ಬಳಿ ಸಮಾರೋಪಗೊಂಡಿತು. ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ವಿ ಪದ್ಮೇಶ್, ನಹಾಸ್ ಪಿ, ವಿನೋದ್ ಪಾಯಂ, ಪಿ.ರವೀಂದ್ರನ್, ಫೈಸಲ್ ಬಿನ್ ಮಹಮ್ಮದ್, ಅಬ್ದುಲ್ ರಹಮಾನ್ ಆಲೂರ್, ಶೆಫೀಕ್ ನಸ್ರುಲ್ಲಾ, ನಾರಾಯಣನ್ ಕರಿಚ್ಚೇರಿ, ವೇಣುಗೋಪಾಲ ಕೆ. ಉಪಸ್ಥಿತರಿದ್ದರು.
ವಾಹಿನಿಗಳಿಗೆ ನಿಷೇಧ: ಕೆಯುಡಬ್ಲ್ಯೂಜೆ ವತಿಯಿಂದ ಪ್ರತಿಭಟನೆ
0
ನವೆಂಬರ್ 08, 2022





