ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎರಡು ಹೊಸ ಹಾಸ್ಟೆಲ್‍ಗಳ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಟ್ಟಡಗಳ ಉದ್ಘಾಟನೆ ನ. 9ರಂದು ಸಂಜೆ 4ಕ್ಕೆ ಉಪಕುಲಪತಿ ಎಚ್. ವೆಂಕಟೇಶ್ವರಲು ಉದ್ಘಾಟಿಸುವರು.
ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯದ ನೆರವಿನೊಂದಿಗೆ ಬಾಲಕ ಮತ್ತು ಬಾಲಕಿಯರಿಗಾಗಿ ತಲಾ ಒಂದು ಹಾಸ್ಟೆಲ್ ನಿರ್ಮಿಸಲಾಗಿದೆ. ಪ್ರತಿ ಕಟ್ಟಡದಲ್ಲಿ ನೂರು ಮಂದಿ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗಿದೆ. 2020 ರ ಜನವರಿಯಲ್ಲಿ ಬಾಲಕಿಯರ ಹಾಸ್ಟೆಲ್‍ನ ನಿರ್ಮಾಣ ಪ್ರಾರಂಭಗೊಂಡಿದ್ದು, 5.45ಕೋಟಿ ರೂ. ಹಾಗೂ 2019 ರಲ್ಲಿ ಆರಂಭಿಸಲಾದ ಬಾಲಕರ ಹಾಸ್ಟೆಲ್ ಕಟ್ಟಡವನ್ನು 3.59ಕೋಟಿ ರೂ. ವಎಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸಕ್ತ ಕ್ಯಾಂಪಸ್‍ನಲ್ಲಿ ಐದು ಹಾಸ್ಟೆಲ್‍ಗಳಿದ್ದು, 900 ಜನರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತಿದೆ.
ಕೇಂದ್ರೀಯ ವಿಶ್ವ ವಿದ್ಯಾಲಯ: ಇಂದು ಎರಡು ಹಾಸ್ಟೆಲ್ ಕಟ್ಟಡಗಳ ಉದ್ಘಾಟನೆ
0
ನವೆಂಬರ್ 08, 2022
Tags




