ಕಾಸರಗೋಡು: ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಏಕತಾ ಓಟವನ್ನು ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿತ್ತು. ಸಂಘಟಿತ ದೈಹಿಕ ಶಿಕ್ಷಣದ ಮಾರ್ಗದರ್ಶನದಲ್ಲಿ ಎನ್‍ಎಸ್‍ಎಸ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಕಚೇರಿ ಮತ್ತು ಮುಖ್ಯ ಜಾಗೃತ ಅಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಏಕತಾ ಓಟ ನಡೆಸಲಾಯಿತು. ಉಪಕುಲಪತಿ ಪೆÇ್ರ. ಎಚ್. ವೆಂಕಟೇಶ್ವರಲು ಸಮಾರಂಭಕ್ಕೆ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಪ್ರಭಾರಿ ಕುಲಸಚಿವ ಪೆÇ್ರ.ರಾಜೇಂದ್ರ ಪಿಲಾಂಗಟ್ಟೆ, ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪೆÇ್ರ.ಕೆ. ಅರುಣ್ ಕುಮಾರ್, ಮುಖ್ಯ ವಿಜಿಲೆನ್ಸ್ ಅಧಿಕಾರಿ ಪೆÇ್ರ.ಮುತ್ತುಕುಮಾರ್, ಮುತ್ತುಚಾಮಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಬೋಧಕ ಡಾ. ಚಂದ್ರಶೇಖರನ್ ಮೇಲೋತ್ ಮತ್ತು ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಎಸ್.ಅಂಬಳಗಿ ನೇತೃತ್ವ ವಹಿಸಿದ್ದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಏಕತಾ ಓಟ
0
ನವೆಂಬರ್ 08, 2022





