ಕುಂಬಳೆ: ಕೇರಳ ರಾಜ್ಯದ 61ನೇ ಶಾಲಾ ಕಲೋತ್ಸವದ ಅಂಗವಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ಕಲೋತ್ಸವದ ಪ್ರೌಢಶಾಲಾ ವಿಭಾಗದ ಯಕ್ಷಗಾನ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಯಕ್ಷಗಾನ ತಂಡ ಪ್ರಸ್ತುತಪಡಿಸಿದ ‘ನರಕಾಸುರ ಮೋಕ್ಷ’ ಪ್ರಸಂಗ ಭಾಗವನ್ನು ಪ್ರದರ್ಶಿಸಿ ‘ಎ’ ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಯಕ್ಷಗಾನ ಗುರುಗಳಾದ ಶೇಖರ್ ಶೆಟ್ಟಿ ಬಾಯಾರು ನಿರ್ದೇಶಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಶೇಖರ್ ಶೆಟ್ಟಿ ಬಾಯಾರು, ಚೆಂಡೆಯಲ್ಲಿ ಶಿವರಾಮ ಆಚಾರಿ ಧರ್ಮತ್ತಡ್ಕ, ಮದ್ದಳೆಯಲ್ಲಿ ಲಕ್ಷ್ಮೀಶ ಬೆಂಗ್ರೋಡಿ ಹಾಗೂ ಚಕ್ರತಾಳದಲ್ಲಿ ಸಂದೇಶ್ ಪಂಜತೊಟ್ಟಿ ಸಹಕರಿಸಿದರು. ಪಾತ್ರವರ್ಗದಲ್ಲಿ ಶ್ರೀಕೃಷ್ಣನಾಗಿ ಶ್ರೀನಿತ್ಯಾ ಸಿ. ಎಚ್.(ಹತ್ತನೇ ತರಗತಿ), ಸತ್ಯಭಾಮೆಯಾಗಿ ಗಣ್ಯಶ್ರೀ (ಹತ್ತನೇ ತರಗತಿ), ನರಕಾಸುರನಾಗಿ ಸಮೃದ್ಧ್(ಹತ್ತನೇ ತರಗತಿ), ದೇವೇಂದ್ರನಾಗಿ ಪ್ರಥಮ್ ಶೆಟ್ಟಿ(ಒಂಬತ್ತನೇ ತರಗತಿ), ಅಗ್ನಿಯಾಗಿ ವರ್ಷಾ(ಹತ್ತನೇ ತರಗತಿ) ಹಾಗೂ ವಿದೂಷಕನ ಪಾತ್ರದಲ್ಲಿ ಲಿಖಿತ್ ಕೃಷ್ಣ (ಒಂಬತ್ತನೇ ತರಗತಿ) ಅಭಿನಯಿಸಿದರು. ವಿದ್ಯಾರ್ಥಿಗಳ ಯಶಸ್ಸಿಗೆ ಶಾಲಾ ವ್ಯವಸ್ಥಾಪಕರು, ಮುಖ್ಯೋಪಾಧ್ಯಾಯರು, ರಕ್ಷಕ-ಶಿಕ್ಷಕ ಸಂಘ, ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗ ಪ್ರಶಂಸಿಸಿದರು.
ಯಕ್ಷಗಾನ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
0
ನವೆಂಬರ್ 29, 2022
Tags




.jpg)
