ಬದಿಯಡ್ಕ: ಪ್ರೌಢ ಶಿಕ್ಷಣ ಇಲಾಖೆಯ ಯೋಜನಾ ನಿಧಿಯಡಿ ಎಡನೀರು ಹೈಯರ್ ಸೆಕೆಂಡರಿ ಶಾಲೆಗೆ ನಿರ್ಮಿಸಿರುವ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್, ಸಲೀಂ ಎಡನೀರು, ಕೆ.ವೇಣುಗೋಪಾಲ್, ಪಿಟಿಎ ಅಧ್ಯಕ್ಷ ಹುಸೇನ್ ಎಡನೀರು, ಮಿನಿತಾ ಕೃಷ್ಣನ್, ವೈ.ಕುಂಞÂ ರಾಮನ್, ಅಬ್ದುಲ್ಲ ಕುಂಜಾರು, ಕೆ.ಬಾಲಕೃಷ್ಣನ್, ಎಂ.ಎ.ವಿನೋಜ್, ಸಿ.ಕೆ.ಜಗದೀಶ್, ಅಬ್ದುಲ್ ಮುನೀರ್ ಉಪಸ್ಥಿತರಿದ್ದು ಶುಭಹಾರೈಸಿದರು. ಪ್ರಾಂಶುಪಾಲ ಪಿ.ಸಿ.ಸಿದ್ದೀಕ್ ಸ್ವಾಗತಿಸಿ, ಮುಖ್ಯಶಿಕ್ಷಕ ಪಿ.ಎಸ್.ಸಂತೋಷ್ ಕುಮಾರ್ ವಂದಿಸಿದರು.
ಎಡನೀರು ಹೈಯರ್ ಸೆಕೆಂಡರಿ ಶಾಲಾ ಕಟ್ಟಡ ಉದ್ಘಾಟನೆ
0
ನವೆಂಬರ್ 29, 2022
Tags




.jpg)
