ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಯೋಜನೆಗೆ ಚಾಲನೆ ನೀಡಿದೆ. ಕುಂಬ್ಡಾಜೆ ಜಿಜೆಬಿಎಸ್ ಶಾಲೆಯ ಎಲ್ಲಾ ಮಕ್ಕಳಿಗೆ ಪಂಚಾಯತಿ ಯೋಜನಾ ನಿಧಿಗೆ ಸೇರಿಸುವ ಮೂಲಕ ಬೆಳಗಿನ ಉಪಹಾರವನ್ನು ಖಾತ್ರಿಪಡಿಸುತ್ತಿದೆ.
ಪ್ರಸ್ತುತ ಶಾಲೆಯಲ್ಲಿ 139 ವಿದ್ಯಾರ್ಥಿಗಳಿದ್ದಾರೆ. ಕುಂಬ್ಡಾಜೆ ಗ್ರಾ.ಪಂ.ಅಧ್ಯಕ್ಷ ಹಮೀದ್ ಪೆÇಸೋಳಿಕೆ ಶಾಲಾ ಉಪಹಾರ ಯೋಜನೆಯನ್ನು ಉದ್ಘಾಟಿಸಿದರು. ಅನೇಕ ಮಕ್ಕಳು ಬೆಳಗಿನ ಉಪಾಹಾರ ಸೇವಿಸದೆಯೇ ಶಾಲೆ ತಲುಪುತ್ತಾರೆ ಎಂಬ ಅರಿವು ಇಂತಹದೊಂದು ಯೋಜನೆಗೆ ನಾಂದಿ ಹಾಡಿತು. ಶಿಕ್ಷಣದ ಜೊತೆಗೆ ಪೌಷ್ಟಿಕಾಂಶವನ್ನು ಖಚಿತಪಡಿಸುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆಗೆ 2 ಲಕ್ಷ ರೂ. ಮೀಸಲಿರಿಸಲಾಗಿದೆ.
ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ಪಿಟಿಎ ಅಧ್ಯಕ್ಷ ಮಜೀದ್ ಚಕ್ಕುಡೆಲ್, ಎಸ್.ಎಂ.ಸಿ. ಉಪಾಧ್ಯಕ್ಷ ಶರೀಫ್ ಪಾಲಕ್ಕಾರ್ ಭಾಗವಹಿಸಿದ್ದರು. ಮುಖ್ಯಶಿಕ್ಷಕ ಬಿ.ಎಂ.ಪ್ರಕಾಶ್ ಸ್ವಾಗತಿಸಿ, ಸಿಬ್ಬಂದಿ ಕಾರ್ಯದರ್ಶಿ ಪಿ.ವಿ.ಚಂದ್ರನ್ ವಂದಿಸಿದರು.
ವಿದ್ಯಾರ್ಥಿಗಳಿಗೆ ಪೌಷ್ಠಿಕ ಉಪಹಾರ ಯೋಜನೆಗೆ ನಾಂದಿಹಾಡಿದ ಕುಂಬ್ಡಾಜೆ ಗ್ರಾ.ಪಂ.
0
ನವೆಂಬರ್ 29, 2022
Tags




.jpeg)
