ಕಾಸರಗೋಡು: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ 35 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಶಿಕ್ಷಣ ಮತ್ತು ಕಾರ್ಮಿಕ ಇಲಾಖೆ ಸಚಿವ ವಿ. ಶಿವನ್ ಕುಟ್ಟಿ ಮಂಗಳವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕೇರಳದ ಅಭಿವೃದ್ಧಿಗೆ ವೇಗ, ಮತ್ತು ಶಕ್ತಿ ನೀಡುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಶೈಕ್ಷಣಿಕ ವ್ಯವಸ್ಥೆಗಳು ಅದನ್ನು ಕಾಲಕಾಲಕ್ಕೆ ಪರಿಷ್ಕರಣೆಗೊಳಪಡಿಸುವುದರ ಜತೆಗೆ ಶಿಕ್ಷಣವನ್ನು ಉದ್ಯೋಗ ಮತ್ತು ಪ್ರಗತಿಯೊಂದಿಗೆ ಜೋಡಿಸಿಕೊಂಡು ಮುಂದುವರಿಯಬೇಕದ ಅನಿವಾರ್ಯತೆಯಾಗಿದ್ದು, ಮಕ್ಕಳ ಕೌಶಲ್ಯಗಳನ್ನು ಬಹಿರಂಗಪಡಿಸುವುದು ಮತ್ತು ವೃತ್ತಿಪರ ತರಬೇತಿ ಮತ್ತು ಉದ್ಯಮಶೀಲತೆ ಅಭಿವೃದ್ಧಿಯ ವಿಶೇಷ ವ್ಯವಸ್ಥೆಯನ್ನು ಒದಗಿಸುವುದು ಈ ಸಮಯದ ಅಗತ್ಯವಾಗಿದೆ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಕಟ್ಟಡ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುಹಮ್ಮದ್ ಮುನೀರ್ ವಡಕುಂಬಾಡಂ ವರದಿ ಮಂಡಿಸಿದರು. ಕಾಸರಗೋಡು ನಗರಸಭೆ ಅಧ್ಯಕ್ಷ ಅಡ್ವ.ವಿ.ಎಂ.ಮುನೀರ್, ಉಪಾಧ್ಯಕ್ಷ ಶಂಸೀದಾ ಫಿರೋಜ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಪ್ರಭಾಕರನ್, ಕೌನ್ಸಿಲರ್ ಎಂ. ಶ್ರೀಲತಾ ಉಪಸ್ಥಿತರಿದ್ದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಟಿ.ಎನ್. ಜಯಶ್ರೀ ವಂದಿಸಿದರು.
ಕಾಸರಗೋಡು ಸರ್ಕಾರಿ ಯುಪಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
0
ನವೆಂಬರ್ 29, 2022
Tags




