ಕಾಸರಗೋಡು: ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನ ಮತ್ತು ವಿದ್ಯಾಕಿರಣ ಯೋಜನೆಯ ಮೂಲಕ ಕೇರಳದ ಶಾಲೆಗಳ ಭೌತಿಕ ಸ್ಥಿತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದಿಗೆ ಆರು ವರ್ಷಗಳಲ್ಲಿ ಹತ್ತುವರೆ ಲಕ್ಷ ಹೊಸ ಮಕ್ಕಳು ಸಾರ್ವಜನಿಕ ಶಿಕ್ಷಣಕ್ಕೆ ಪ್ರವೇಶಿಸಿವುದಾಗಿ ಶಿಕ್ಷಣ ಮತ್ತು ಕಾರ್ಮಿಕ ಖಾತೆ ಸಚಿವ ವಿ.ಶಿವನ್‍ಕುಟ್ಟಿ ತಿಳಿಸಿದ್ದಾರೆ.
ಅವರು ಮಧೂರು ಪಂಚಾಯಿತಿ ವ್ಯಾಪ್ತಿಯ ಶಿರಿಬಾಗಿಲು ಸರ್ಕಾರಿ ವೆಲ್‍ಫೇರ್ ಎಲ್‍ಪಿ ಶಾಲೆಗೆ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಕೇರಳದಲ್ಲಿ ಕನಿಷ್ಠ ಕಾಲಾವಧಿಯಲ್ಲಿ 3000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ 55 ಲಕ್ಷ ರೂ. ವೆಚ್ಚದಲ್ಲಿ, 85.24 ಚದರ ಮೀಟರ್ ವಿಸ್ತೀರ್ಣದಲ್ಲಿ ಎರಡು ತರಗತಿ ಕೊಠಡಿಗಳು, ಶೌಚಾಲಯ ಬ್ಲಾಕ್ ಮತ್ತು ಮೆಟ್ಟಿಲು ನಿರ್ಮಿಸಲಾಗಿದೆ.
ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಬ್ಲಾಕ್ ಪಂಚಾಯಿತಿ ಸದಸ್ಯೆ ಜಮೀಲಾ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿ.ಎಚ್.ಶಶಿಕಲಾ ವಂದಿಸಿದರು.
ಆರು ವರ್ಷಗಳಲ್ಲಿ ಹತ್ತೂವರೆ ಲಕ್ಷ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣಕ್ಕೆ ಸೇರ್ಪಡೆ: ಸಚಿವ ವಿ. ಶಿವನ್ ಕುಟ್ಟಿ
0
ನವೆಂಬರ್ 29, 2022
Tags





