ಕಾಸರಗೋಡು :ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕ್ರೀಡಾಕೂಟ ಉದ್ಘಾಟನೆರಗೋಡು: ಜಿಲ್ಲಾ ಶಾಲಾ ಕ್ರೀಡೋತ್ಸವ ಗುರುವಾರ ನೀಲೇಶ್ವರ ಪುತ್ತರಿಯಡ್ಕದ ಇಎಂಎಸ್ ಕ್ರೀಡಾಂಗಣದಲ್ಲಿ ಆರಂಭಗೊಂಡಿತು. ಶಾಸಕ ಎಂ.ರಾಜಗೋಪಾಲನ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿ, ಕ್ರಿಡಾಳುಗಳ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷೆ, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ. ಶಾಂತಾ ಅಧ್ಯಕ್ಷತೆ ವಹಿಸಿದ್ದರು. . ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ನಗರಸಭೆ ಉಪಾಧ್ಯಕ್ಷ ಪಿ. ಪಿ ಮುಹಮ್ಮದ್ ರಾಫಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದಾಕ್ಷಾಯಿಣಿ ಕುಞÂಕಣ್ಣನ್, ನಗರಸಭಾ ಸದಸ್ಯರಾದ ವಿ. ರಾಮಚಂದ್ರನ್, ಪಿ.ವಿಜಯಕುಮಾರ್, ಪಿ.ಕೆ.ನಸೀರ್, ಮಹಮ್ಮದ್ ಕಡಪ್ಪುರಂ, ಪಿ.ಯು.ವಿಜಯಕುಮಾರ್, ಮಡಿಯನ್ ಉಣ್ಣಿಕೃಷ್ಣನ್, ಕೆ.ಸಿ.ಮಾನವರ್ಮ ರಾಜಾ, ಕಲಾಶ್ರೀಧರ್, ಪಿ.ಜಯನ್, ವಿ.ಇ.ಅನುರಾಧ, ಸರ್ಗಂ ವಿಜಯನ್, ನೀಲೇಶ್ವರಂ ರಾಜಾಸ್ ಎಚ್‍ಎಸ್‍ಎಸ್ ಪ್ರಾಂಶುಪಾಲ ಪಿ.ವಿಜೀಶ್ ಉಪಸ್ಥಿತರಿದ್ದರು. ಜಿಲ್ಲಾ ಶಾಲಾ ಕ್ರೀಡಾ ಮತ್ತು ಕ್ರೀಡಾ ಸಂಘದ ಕಾರ್ಯದರ್ಶಿ ಎಂ. ಧನೇಶ್ ಕುಮಾರ್ ವರದಿ ಮಂಡಿಸಿದರು. ಜಿಲ್ಲೆಯ 7 ಉಪಜಿಲ್ಲೆಗಳಿಂದ 2000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದರು. ಯುಪಿ, ಮಿಡ್ಲ್ ಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ 127 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು.
ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕ್ರೀಡಾಕೂಟ ಉದ್ಘಾಟನೆ
0
ನವೆಂಬರ್ 18, 2022
Tags





