ಕಾಸರಗೋಡು: ರಾಷ್ಟ್ರೀಯ ಪತ್ರಕರ್ತರ ದಿನಾಚರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಿರಿಯ ಮಾಧ್ಯಮ ಕಾರ್ಯಕರ್ತರಾದ ರಹಮಾನ್ ತಾಯಿಲಂಗಡಿ ಮತ್ತು ಅಬೂಬಕರ್ ನೀಲೇಶ್ವರ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಶಾಲು ಹೊದಿಸಿ, ಗೌರವಿಸಿದರು. ವಿದ್ಯಾನಗರದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಸನ್ನಿ ಜೋಸೆಫ್, ಛಾಯಾಚಿತ್ರಗ್ರಾಹಕ ಶ್ರೀಕಾಂತ್ ಉಪಸ್ಥೀತರಿದ್ದರು. ಪಡನ್ನಕ್ಕಾಡ್‍ನಲ್ಲಿ ನಡೆದ ಸಮಾರಂಭದಲ್ಲಿ ಅಬೂಬಕರ್ ನೀಲೇಶ್ವರ (ಜುಬೈದಾ) ಅವರನ್ನು ಹಿರಿಯ ಫೆÇೀಟೋ ಜರ್ನಲಿಸ್ಟ್ ಕೆ. ಮೋಹನನ್ ಅಧ್ಯಕ್ಷತೆ ವಹಿಸಿದ್ದರು. ಟಿ.ಕೆ. ಕೃಷ್ಣನ್, ಸುನೋಜ್ ಮ್ಯಾಥ್ಯೂ ಮತ್ತು ದೀಕ್ಷಿತಾ ಕೃಷ್ಣ ಉಪಸ್ಥಿತರಿದ್ದರು.
ರಾಷ್ಟ್ರೀಯ ಪತ್ರಿಕಾ ದಿನಾಚರಣೆ: ಹಿರಿಯ ಪತ್ರಕರ್ತರಿಗೆ ಸನ್ಮಾನ
0
ನವೆಂಬರ್ 18, 2022
Tags





.jpg)
