HEALTH TIPS

ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುತ್ತೀರಾ? ಅಪಾಯ ತಪ್ಪಿದ್ದಲ್ಲ ಎಚ್ಚರ!

 ಕಾಫಿ, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಬೆಡ್ ನಿಂದ ಎದ್ದಾಗ ಏನು ಇಲ್ಲದಿದ್ದರೂ ಒಂದು ಕಪ್ ಕಾಫಿ ಸಿಕ್ಕರೆ ಸಾಕು ಅವರ ದಿನ ಅತ್ಯುತ್ತಮವಾಗಿರುತ್ತದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ದಿನ ನಿತ್ಯ ಕಾಫಿಯಿಂದಲೇ ದಿನ ಆರಂಭ ಮಾಡುವ ಅನೇಕ ಜನರು ನಮ್ಮ ಮುಂದೆ ಇದ್ದಾರೆ. ಕಾಫಿಗೆ ಅಷ್ಟು ಅಡಿಕ್ಟ್ ಆಗಿರುತ್ತಾರೆ ಕೆಲವು ಜನರು.

ಕ್ಯಾಪೊಚಿನೋ, ಎಸ್ಪ್ರೆಸ್ಸೋ, ಅಮೆರಿಕನೋ, ಲಟ್ಟೆ, ಅರೇಬಿಕ್ ಹೀಗೆ ವಿವಿಧ ಫ್ಲೇವರ್ ಗಳಲ್ಲಿ ಕಾಫಿ ಈಗ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ. ಬೆಳಗ್ಗಿನ ಹವಾಮಾನಕ್ಕೆ ಕಾಫಿ ಕುಡಿದರೆ ಅದರಷ್ಟು ಮಜಾ ಬೇರೆ ಯಾವುದು ಇಲ್ಕ್ಯಾಪೊಚಿನೋ, ಎಸ್ಪ್ರೆಸ್ಸೋ, ಅಮೆರಿಕನೋ, ಲಟ್ಟೆ, ಅರೇಬಿಕ್ ಹೀಗೆ ವಿವಿಧ ಫ್ಲೇವರ್ ಗಳಲ್ಲಿ ಕಾಫಿ ಈಗ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ. ಬೆಳಗ್ಗಿನ ಹವಾಮಾನಕ್ಕೆ ಕಾಫಿ ಕುಡಿದರೆ ಅದರಷ್ಟು ಮಜಾ ಬೇರೆ ಯಾವುದು ಇಲ್ಲ ಎಂದು ಅಂದುಕೊಳ್ಳುತ್ತೇವೆ. ಕಾಫಿ ಕುಡಿದರೆ ನಿದ್ದೆಯಿಂದ ಹೊರಬಂದ ಹಾಗೇ ಅನಿಸುತ್ತದೆ, ಕಾಫಿ ಕುಡಿದರೆ ಸೋಮಾರಿತನ ದೂರವಾಗಿ ಆಕ್ಟೀವ್ ಆಗಿ ಇರುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಹೌದು, ಅದರಲ್ಲಿರುವ ಕೆಫೇನ್ ಗುಣ ನಮ್ಮಲ್ಲಿರುವ ಸೋಮಾರಿತನ ದೂರ ಮಾಡುತ್ತೆ, ನಿದ್ದೆಯಿಂದ ಬಡಿದೆಬ್ಬಿಸುವ ಗುಣವನ್ನು ಹೊಂದಿದೆ. ಆದರೆ ಪೌಷ್ಟಿಕತಜ್ಞರ ಪ್ರಕಾರ ಇದು ತಪ್ಪಂತೆ, ಹೌದು, ಈ ಬೆಳಗ್ಗೆ ಎದ್ದು ಕಾಫಿ ಕುಡಿಯುವ ಹವ್ಯಾಸ ಒಳ್ಳೆಯದಲ್ಲವಂತೆ.ಲ ಎಂದು ಅಂದುಕೊಳ್ಳುತ್ತೇವೆ. ಕಾಫಿ ಕುಡಿದರೆ ನಿದ್ದೆಯಿಂದ ಹೊರಬಂದ ಹಾಗೇ ಅನಿಸುತ್ತದೆ, ಕಾಫಿ ಕುಡಿದರೆ ಸೋಮಾರಿತನ ದೂರವಾಗಿ ಆಕ್ಟೀವ್ ಆಗಿ ಇರುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಹೌದು, ಅದರಲ್ಲಿರುವ ಕೆಫೇನ್ ಗುಣ ನಮ್ಮಲ್ಲಿರುವ ಸೋಮಾರಿತನ ದೂರ ಮಾಡುತ್ತೆ, ನಿದ್ದೆಯಿಂದ ಬಡಿದೆಬ್ಬಿಸುವ ಗುಣವನ್ನು ಹೊಂದಿದೆ. ಆದರೆ ಪೌಷ್ಟಿಕತಜ್ಞರ ಪ್ರಕಾರ ಇದು ತಪ್ಪಂತೆ, ಹೌದು, ಈ ಬೆಳಗ್ಗೆ ಎದ್ದು ಕಾಫಿ ಕುಡಿಯುವ ಹವ್ಯಾಸ ಒಳ್ಳೆಯದಲ್ಲವಂತೆ. 

ಹೌದು, ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿದು ದಿನ ಆರಂಭಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ತೂಕ ಹೆಚ್ಚುವುದು, ಗ್ಯಾಸ್ಟ್ರಿಕ್, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು. ಇನ್ನು ಕೆಲವರು ಕಚೇರಿಯಲ್ಲಿ ದಿನದಲ್ಲಿ ಮೂರರಿಂದ ನಾಲ್ಕು ಲೋಟ ಕಾಫಿ ಕುಡಿಯುವುದುಂಟು. ಇದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವಂತೆ. ಹಾಗಾದ್ರೆ ಬೆಳಗ್ಗಿನ ಒಂದು ಲೋಟ ಕಾಫಿ ಯಾವ ರೀತಿಯ ಪರಿಣಾಮ ಮನುಷ್ಯನ ಮೇಲೆ ಉಂಟಾಗುತ್ತದೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಆಸಿಡ್ ಉಂಟು ಮಾಡುತ್ತದೆ!

ನೀವು ದಿನ ನಿತ್ಯ ಎದ್ದು ಏನು ತಿನ್ನದೆ ಒಂದು ಲೋಟ ಕಾಫಿ ಕುಡಿಯಿರಿ. ಒಂದು ತಿಂಗಳಕಾಲ ಈ ಹವ್ಯಾಸ ಮುಂದುವರೆಸಿ. ಆಗ ನಿಮಗೆ ನಿಮ್ಮ ಆರೋಗ್ಯದಲ್ಲಿ ಏನು ಬದಲಾವಣೆ ಆಗಿದೆ ಎಂದು ತಿಳಿಯುತ್ತದೆ. ಹೌದು, ಕಾಫಿಯು ಹೊಟ್ಟೆಯಲ್ಲಿ ಆಮ್ಲ ಅಥವಾ ಆಸಿಡ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾನಿಕಾರಕ ಸ್ಟೊಮಾ ಆಮ್ಲದ ಉತ್ಪಾದನೆಯಲ್ಲಿನ ಹೆಚ್ಚಳವು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ತೀವ್ರವಾಗಿ ಅಡ್ಡಿಪಡಿಸುತ್ತದೆ. ಇದರಿಂದಾಗಿ ಅಜೀರ್ಣ, ಹೊಟ್ಟೆ ಉಬ್ಬುವುದು, ವಾಕರಿಕೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ವಿಷವನ್ನು ಪಡೆಯುವುದು ಒಂದೇ ರೀತಿಯಾಗಿದೆ. ವಿಷ ಒಂದೇ ಬಾರಿ ಕೊಂದರೆ ಕಾಫಿ ಮೆಲ್ಲ ಮೆಲ್ಲಗೆ ಅಂದರೆ ಸ್ಲೋ ಪಾಯಿಸನ್ ರೀತಿ ಹೊಟ್ಟೆಯಲ್ಲಿ ಕೆಲಸ ಮಾಡುತ್ತಿರುತ್ತದೆ.

ಕಾಫಿ ಕಾರ್ಟಿಸೋಲ್ ಹೆಚ್ಚಿಸುತ್ತದೆ!

ಕಾಫಿ ಸೇವನೆಯಿಂದ ನಿಮ್ಮ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚುತ್ತದೆ. ಇನ್ನು ಕಾರ್ಟಿಸೋಲ್ ಲೆವೆಲ್ ಹೆಚ್ಚಾದರೆ ಅಂಡೋತ್ಪತ್ತಿ, ತೂಕ ಮತ್ತು ಹಾರ್ಮೋನ್ ಸಮತೋಲನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಒತ್ತಡದ ಹಾರ್ಮೋನ್ ಎಂದು ಕರೆಯಲ್ಪಡುವ - ಕಾರ್ಟಿಸೋಲ್ ಇತರ ವಿಷಯಗಳ ಜೊತೆಗೆ, ಶಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನೀವು ಎಚ್ಚರಗೊಳ್ಳುವ ಸಮಯದಲ್ಲಿ ನೈಸರ್ಗಿಕವಾಗಿ ಎಚ್ಚರಗೊಳ್ಳುವಂತೆ ಮಾಡುತ್ತದೆ. ಈ ಎಲ್ಲಾ ಚಟುವಟಿಕೆ ಮೇಲೆ ಒಂದು ಕಾಫಿ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಕಾರ್ಟಿಸೋಲ್ ಉತ್ಪಾದನೆಯನ್ನು ಕಾಫಿ ಉತ್ತೇಜಿಸುವುದರಿಂದ ಇದರಿಂದ ದೂರ ಉಳಿಯುವುದು ಉತ್ತಮ ಆಯ್ಕೆ.

ಮಧುಮೇಹದಲ್ಲಿ ಹೆಚ್ಚಳ!

ನೀವು ಬೆಳಗ್ಗೆ ಎದ್ದು ಕಾಫಿ ಕುಡಿದರೆ ನಿಮ್ಮ ಮಧುಮೇಹವು ಹೆಚ್ಚುತ್ತದೆ. ಹೌದು, ಬೆಳಗ್ಗೆ ಎದ್ದು ಕಾಫಿ ಕುಡಿದರೆ ಮೊದಲು ನಿಮ್ಮ ದೇಹಕ್ಕೆ ಸಿಗುವುದು ಸಕ್ಕರೆಯುಕ್ತವಾದ ದ್ರವ ವಸ್ತು ಹೀಗಾಗಿ ಬೆಳಗ್ಗೆಯೇ ನಿಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು. ಮಧುಮೇಹದ ನಿಯಂತ್ರಣದ ಮೇಲೂ ಪರಿಣಾಮ ಬೀರುತ್ತದೆ.

ಮೂಡ್ ಬದಲಾಗುತ್ತದೆ!

ನೀವು ಬೆಳಗ್ಗೆ ಎದ್ದಾಗ ನಿಮ್ಮ ಮೂಡ ಅತ್ಯುತ್ತಮವಾಗಿರುತ್ತದೆ. ಆದರೆ ಒಂದು ಲೋಟ ಕಾಫಿ ನಿಮ್ಮ ಮೂಡನ್ನು ಬದಲಾವಣೆ ಮಾಡಬಹುದು. ಹೌದು, ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ನಿಮಗೆ ನಡುಕ, ಶೇಕ್ಸ್ ಮತ್ತು ಮೂಡ್ ಬದಲಾವಣೆಗಳು ಸೇರಿದಂತೆ ಇತರ ಪರಿಣಾಮಗಳು ಉಂಟಾಗಬಹುದು. ಇದರಿಂದ ನಿಮ್ಮ ದಿನವೇ ಹಾಳಾಗಬಹುದು.

ಥೈರಾಯ್ಡ್ ಹಾರ್ಮೋನ್ ಅಸಮತೋಲನ!

ಒಂದು ಕಾಫಿ ಥೈರಾಯ್ಡ್ ಹಾರ್ಮೋನ್ ಮೇಲೆ ಪರಿಣಾಮ ಬೀರಬಹುದು. ಇದರ ಅಸಮತೋಲನಕ್ಕೆ ಇದು ಕಾರಣವಾಗಬಹುದು. ಹೌದು, ಲೆವೊಥೈರಾಕ್ಸಿನ್ (ಸಿಂಥೆಟಿಕ್ ಥೈರಾಯ್ಡ್ ಹಾರ್ಮೋನ್) ಹೀರಿಕೊಳ್ಳುವಿಕೆಯ ಮೇಲೆ ಕಾಫಿಯು ಪರಿಣಾಮ ಬೀರುತ್ತದೆ, ಇದರಿಂದಾಗಿ T4 ಅನ್ನು T3 ಹಾರ್ಮೋನುಗಳಿಗೆ ಪರಿವರ್ತಿಸುವುದರ ಮೇಲೆ ಕಾಫಿಯು ಪರಿಣಾಮ ಬೀರುತ್ತದೆ. ಹೀಗಾಗಿ ಕಾಫಿಯಿಂದ ದೂರ ಇರುವುದು ಒಳ್ಳೆಯದು.

ದೇಹದಲ್ಲಿ ಹಲವು ಬದಲಾವಣೆ!

ಕಾಫಿ ಸೇವನೆಯಿಂದ ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತ ಹೆಚ್ಚುತ್ತದೆ. ಇದರಲ್ಲಿರುವ ಕೆಫೇನ್ ಗುಣ ಅಥವಾ ಅತಿಯಾದ ಕೆಫೇನ್ ಸೇವನೆ ಆಯಾಸ, ಚರ್ಮದ ಸಮಸ್ಯೆಗಳು, ಮಧುಮೇಹ ಮತ್ತು ಸ್ವಯಂ ನಿರೋಧಕ ಪರಿಸ್ಥಿತಿಗಳು ಉರಿಯೂತಕ್ಕೆ ಸಂಬಂಧಿಸಿದ ಕೆಲವು ಪರಿಸ್ಥಿತಿಗಳಿಗೆ ಕಾರಣವಾಗಬಹುದು.

ಹಾಗಾದರೆ ಯಾವಾಗ ಕಾಫಿ ಕುಡಿಯಬಹುದು!

ಬೆಳಗ್ಗೆ ಎದ್ದು ನೇರವಾಗಿ ಅಥವಾ ಖಾಲಿ ಹೊಟ್ಟೆಗೆ ಕಾಫಿ ಕುಡಿಯಲೇ ಬೇಡಿ ಎಂದು ಪರಿಣಿತರು ಹೇಳುತ್ತಾರೆ. ಅದಾಗ್ಯೂ ನೀವು ಕಾಫಿ ಕುಡಿಯಲೇಬೇಕು ಎಂದು ಅಂದುಕೊಂಡಿದ್ದರೆ ಬೆಳಗ್ಗಿನ ಉಪಹಾರದ ಬಳಿಕ ಸ್ವಲ್ಪ ಕಾಫಿ ಸೇವನೆ ಮಾಡಬಹುದು. ದಿನ ನಿತ್ಯ ಅಂದರೆ ಮೂರು ಬಾರಿಗೂ ಹೆಚ್ಚು ಕುಡಿಯುವುದಕ್ಕೂ ಕಡಿವಾಣ ಹಾಕಿದರೆ ಉತ್ತಮ.


 

 

 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries