ಈ ವರ್ಷದ ಕೊನೆಯ ಚಂದ್ರಗ್ರಹಣ 2022ನೇ ನವೆಂಬರ್ 8ರಂದು ಸಂಭವಿಸಲಿದೆ. ಅಕ್ಟೋಬರ್ 25ರಂದು ಸಂಭವಿಸಿದ್ದ ಸೂರ್ಯಗ್ರಹಣದ ನಂತರ ಮತ್ತೆ ನಂ.8ರಂದು ಇದೀಗ ಚಂದ್ರಗ್ರಹಣ ನಡೆಯುತ್ತಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಈ ಚಂದ್ರ ಗ್ರಹಣವು ಭಾರತ, ಏಷ್ಯಾದ ಇತರ ದೇಶಗಳು, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ಪೂರ್ವ ಯುರೋಪ್ನ ಭಾಗಗಳು ಮತ್ತು ದಕ್ಷಿಣ ಅಮೆರಿಕಾದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ.
ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವ ಸಮಯ, ಎಷ್ಟು ಮ್ಯಾಗ್ನಿಟ್ಯೂಡ್ ಇರುತ್ತದೆ, ಇದನ್ನು ಹೇಗೆ ನೋಡಬೇಕು ಇಲ್ಲಿದೆ ಮಾಹಿತಿ:
ನವೆಂಬರ್ 8, ಮಂಗಳವಾರ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಗ್ರಹಣವು ನವೆಂಬರ್ 8ರಂದು ಭಾರತೀಯ ಕಾಲಮಾನ ಸಂಜೆ 5:32ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:18ಕ್ಕೆ ಕೊನೆಗೊಳ್ಳುತ್ತದೆ.
ಪೂರ್ಣ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 3.46.
ಚಂದ್ರ ಮುಳುಗುವ ಸಮಯ - 6.19 ಬೆಳಗ್ಗೆ
2. ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?
ಭಾರತದಲ್ಲಿ, ಸಂಪೂರ್ಣ ಚಂದ್ರಗ್ರಹಣವು ಪೂರ್ವ ಭಾಗಗಳಿಂದ ಮಾತ್ರ ಗೋಚರಿಸುತ್ತದೆ ಆದರೆ ಭಾಗಶಃ ಗ್ರಹಣವು ದೇಶದ ಇತರ ಭಾಗಗಳಿಂದ ಗೋಚರಿಸುತ್ತದೆ. ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ ಮತ್ತು ಗುವಾಹಟಿಯಲ್ಲಿ ವಾಸಿಸುವ ಜನರು ನವೆಂಬರ್ 8 ರಂದು ಚಂದ್ರ ಗ್ರಹಣವನ್ನು ವೀಕ್ಷಿಸಬಹುದು.
ಅಲ್ಲದೆ, ಕಠ್ಮಂಡು, ಟೋಕಿಯೊ, ಮನಿಲಾ, ಬೀಜಿಂಗ್, ಸಿಡ್ನಿ, ಜಕಾರ್ತಾ, ಮೆಲ್ಬೋರ್ನ್, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಸಿಟಿ, ಲಾಸ್ ಏಂಜಲೀಸ್, ಚಿಕಾಗೋ ಮತ್ತು ಮೆಕ್ಸಿಕೋ ಸಿಟಿಯಲ್ಲಿ ವಾಸಿಸುವವರು ಸಹ 2022 ರ ಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಬಹುದು.
3. 2022 ಚಂದ್ರಗ್ರಹಣದ ಮ್ಯಾಗ್ನಿಟ್ಯೂಡ್
ಚಂದ್ರನ ದಕ್ಷಿಣ ಅಂಗವು ಭೂಮಿಯ ನೆರಳಿನ ಮಧ್ಯಭಾಗದ ಮೂಲಕ ಹಾದುಹೋಗುತ್ತದೆ. ಇದು 1.36 ಮ್ಯಾಗ್ನಿಟ್ಯೂಡ್ ಸಂಪೂರ್ಣ ಗ್ರಹಣವಾಗಿರುವುದರಿಂದ, ಗರಿಷ್ಠ ಗ್ರಹಣದಲ್ಲಿ ಚಂದ್ರನು ಭೂಮಿಯ ಅಂಬ್ರಲ್ ನೆರಳಿನಿಂದ ಸಂಪೂರ್ಣವಾಗಿ ಆವರಿಸಲ್ಪಡುತ್ತಾನೆ.
4. ಚಂದ್ರ ಗ್ರಹಣ ವೀಕ್ಷಿಸುವುದು ಹೇಗೆ?
* ಚಂದ್ರಗ್ರಹಣವನ್ನು ವೀಕ್ಷಿಸಲು ನಿಮಗೆ ವಿಶೇಷ ಕನ್ನಡಕದ ಅಗತ್ಯವಿಲ್ಲ.
* ಚಂದ್ರಗ್ರಹಣ ಬರಿಗಣ್ಣಿಗೆ ಗೋಚರಿಸುವುದರಿಂದ ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳ ಅಗತ್ಯವೂ ಇಲ್ಲ. ಉತ್ತಮ ವೀಕ್ಷಣೆಗಾಗಿ ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸಬಹುದು. ನವೆಂಬರ್ 8 ರಂದು ಚಂದ್ರಗ್ರಹಣವು ನಾಸಾದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.
* ನೀವು ಚಂದ್ರ ಮತ್ತು ಆಕಾಶದ ಸ್ಪಷ್ಟ ನೋಟವನ್ನು ಹೊಂದಿರುವವರೆಗೆ ಚಂದ್ರ ಗ್ರಹಣಗಳನ್ನು ನೋಡುವುದು ತುಂಬಾ ಸುಲಭ.





