ಕೋಝಿಕ್ಕೋಡ್: ಕಾರ್ಯಕ್ರಮದಲ್ಲಿ ಮೈಕ್ ಬದಲು ನಾಗರಹಾವು ಬಳಸಿದ ವಾವಾ ಸುರೇಶ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಕ್ಲಿನಿಕಲ್ ನರ್ಸಿಂಗ್ ಎಜುಕೇಶನ್ ಮತ್ತು ನರ್ಸಿಂಗ್ ಸರ್ವಿಸಸ್ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾವಾ ಸುರೇಶ್ ತರಗತಿ ನಡೆಸಿದ್ದರು.
ಕಾರ್ಯಕ್ರಮದ ವೇಳೆ ಮೈಕ್ ಕೆಟ್ಟ ವೇಳೆ ಮೈಕ್ ಬದಲಿಗೆ ಹಾವನ್ನು ಬಳಸಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ.
ತರಗತಿ ನಡೆಸಲು ಹಾವನ್ನು ತಂದಿರುವುದು ವ್ಯಾಪಕ ಟೀಕೆಗೂ ಕಾರಣವಾಗಿತ್ತು. ಹಾವು ಹಿಡಿಯುವಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಸದ ಸುರೇಶ್ ನನ್ನು ವೈದ್ಯಕೀಯ ಕಾಲೇಜಿನಂತಹ ಸಂಸ್ಥೆಗೆ ಕರೆತಂದು ಕ್ಲಾಸ್ ತೆಗೆದುಕೊಂಡಿರುವುದರ ವಿರುದ್ಧವೂ ತಜ್ಞರು ಹರಿಹಾಯ್ದಿದ್ದಾರೆ. ವಾವಾ ಸುರೇಶ್ ಅಕ್ರಮ ಎಸಗಿದ್ದಾನೆ. ವಾವ ಸುರೇಶ್ ಅವೈಜ್ಞಾನಿಕವಾಗಿ ಹಾವುಗಳನ್ನು ನಿರ್ವಹಿಸಿ ಕುಖ್ಯಾತಿ ಗಳಿಸಿದ ವ್ಯಕ್ತಿ ಎಂಬ ಆರೋಪವೂ ಇದೆ.
ಕಳೆದ ಫೆಬ್ರವರಿಯಲ್ಲಿ, ಕೊಟ್ಟಾಯಂನ ನೀಲಂಪೆರೂರ್‍ನಲ್ಲಿ ವಾವಾ ಸುರೇಶ್‍ಗೆ ನಾಗರಹಾವು ಕಚ್ಚಿತ್ತು. ಸೆರೆ ಹಿಡಿದ ಹಾವನ್ನು ಚೀಲದಲ್ಲಿ ಕರೆದೊಯ್ಯವಾಗ ತೊಡೆಯ ಮೇಲೆ ಕಚ್ಚಿದೆ. ಹಲವು ದಿನಗಳ ತಜ್ಞರ ಚಿಕಿತ್ಸೆ ಬಳಿಕ ಸುರೇಶನನ್ನು ಬದುಕಿಸಲಾಯಿತು.
ಹಾವನ್ನು ಮೈಕ್ ಮಾಡಿಕೊಂಡ ವಾವ ಸುರೇಶ ನಿಂದ ತರಗತಿ: ವ್ಯಾಪಕ ಟೀಕೆ
0
ನವೆಂಬರ್ 29, 2022


