ಮಂಜೇಶ್ವರ: ವರ್ಕಾಡಿ ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇದಮೂರ್ತಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ಗಣಹೋಮ, ಹೂವಿನ ಪೂಜೆ, ರಂಗ ಪೂಜೆ, ಶ್ರೀದೇವರ ಉತ್ಸವ ಬಲಿ ಜರಗಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಪಲಿಮಾರು ಮಠಾಧೀಶರೊಂದಿಗೆ ಪಲಿಮಾರು ಮಠದ ಕಿರಿಯ ಯತಿವರ್ಯ ಶ್ರೀ ವಿದ್ಯಾ ರಾಜರಾಜೇಶ್ವರ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನವಿತ್ತರು.
ವೇದಿಕೆಯಲ್ಲಿ ಕಟೀಲಿನ ತಂತ್ರಿವರ್ಯ ಶಿಬರೂರು ವೇದವ್ಯಾಸ ತಂತ್ರಿ, ಕೈರಂಗಳ ಪುಣ್ಯಕೋಟಿ ವಿದ್ಯಾಸಂಸ್ಥೆಯ ಸಂಚಾಲಕ ರಾಜಾರಾಮ್ ಭಟ್ ಟಿ.ಜಿ, ಕ್ಷೇತ್ರದ ಪದಾಧಿಕಾರಿಗಳಾದ ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಕರುಣಾಕರ ಶೆಟ್ಟಿ ಮೊರ್ಲ, ಗಿರೀಶ ಆಳ್ವ ಮೋರ್ಲಾ ಉಪಸ್ಥಿತರಿದ್ದರು. ಮಂಗಳೂರು ಶಾರದಾ ವಿದ್ಯಾಸಂಸ್ಥೆಯ ಎಂ.ಬಿ.ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರೇಮಾನಂದ ರೈ ನೆತ್ತಿಲ ಕೋಡಿ ವಂದಿಸಿದರು. ಮೋಹನದಾಸ್ ಶೆಟ್ಟಿ, ನೆತ್ತಿಲ ಬಾಳಿಕೆ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ದೇವಂದಪಡ್ಪು ಇವರ ಪ್ರಯೋಜಕತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರೀತ ಯಕ್ಷಗಾನ ಕಲಾಸಂಪದ ಕೇಶವ ಶಿಶು ಮಂದಿರ ಕಿನ್ಯಾ ಇದರ ಕಲಾವಿದರು ಕದಂಬ ಕೌಶಿಕೆ ಎಂಬ ಯಕ್ಷಗಾನ ಕಥಾ ಭಾಗವನ್ನು ಆಡಿ ತೋರಿಸಿ ಮನ ರಂಜಿಸಿದರು.




.jpg)
.jpg)
