ಪೆರ್ಲ; ಗ್ರಾಮ ಪಂಚಾಯತಿನ ಯುವ ಪ್ರತಿಭಾ ವೇದಿಕೆಯಾಗುವ ಕೇರಳೋತ್ಸವವನ್ನು ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ನ.14ರಿಂದ 20ರ ತನಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಇದರ ಯಶಸ್ವಿಗಾಗಿ ಪ್ರತ್ಯೇಕ ಸ್ವಾಗತ ಸಮಿತಿ ಸಭೆ ರಚಿಸಲಾಗಿದ್ದು ಪಂಚಾಯತಿಯ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಟೋಟ, ಕ್ರೀಡೆ ಹಾಗೂ ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಪಂಚಾಯತು ಸಭಾಂಗಣದಲ್ಲಿ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಪಂಚಾಯತು ಅಭಿವೃದ್ಧಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್,ಪಂ.ಸದಸ್ಯರಾದ ಮಹೇಶ್ ಭಟ್, ರಾಧಾಕೃಷ್ಣ ನಾಯಕ್ ಶೇಣಿ, ರಾಮಚಂದ್ರ, ಶಶಿಧರ ಕಾಟುಕುಕ್ಕೆ, ಕುಸುಮಾವತಿ ಟೀಚರ್, ಉಷಾ ಗಣೇಶ್, ಆಶಾಲತಾ ಮೊದಲಾದವರು ಭಾಗವಹಿಸಿದ್ದರು. ಪಂಚಾಯತು ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ ಕೇರಳೋತ್ಸವದ ವಿಸೃತ ವಿವರಣೆ ನೀಡಿದರು. ಸ್ಪೋಟ್ರ್ಸ್ ,ಗೇಮ್ಸ್ ಹಾಗೂ ಸಾಂಸ್ಕøತಿಕ ಸ್ಪರ್ಧೆ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಸಲು ಸಭೆ ತೀರ್ಮಾನಿಸಿದೆ. ಕೇರಳೋತ್ಸವದ ಸ್ಪರ್ಧಾ ವಿವರ ಹಾಗೂ ಅರ್ಜಿ ಫಾರಂ ಪಂಚಾಯತು ಕಚೇರಿಯಲ್ಲಿ ಲಭ್ಯವಿದ್ದು ಭರ್ತಿ ಮಾಡಿ ಕಚೇರಿಗೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ.14ರಿಂದ 20 ರ ತನಕ ಎಣ್ಮಕಜೆ ಗ್ರಾಮ ಪಂಚಾಯತಿ ಕೇರಳೋತ್ಸವಕ್ಕೆ ನಿರ್ಧಾರ
0
ನವೆಂಬರ್ 08, 2022
Tags



.jpg)
