ಕುಂಬಳೆ: ಶೇಣಿ ಶ್ರೀಶಾರದಾಂಬ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಗೋವಿಂದ ಭಟ್(84) ನೀರಮೂಲೆ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಹಾಗೂ ಹಿತೈಷಿಗಳಾಗಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಇವರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಮೃತರಿಗೆ ಶೇಣಿ ಶ್ರೀ ಶಾರದಾಂಬ ವಿದ್ಯಾ ಸಂಸ್ಥೆಗಳು, ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಶಾಲಾ ಹಳೆ ವಿದ್ಯಾರ್ಥಿ ಸಂಘ ಸಂತಾಪ ಸೂಚಿಸಿವೆ.
ನಿವೃತ್ತ ಅಧ್ಯಾಪಕ ವಿ.ಗೋವಿಂದ ಭಟ್ ನಿಧನ
0
ನವೆಂಬರ್ 08, 2022
Tags

-v.govinda%20bhat.jpg)
