ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಪ್ಪಳ ಹಿದಾಯತ್ ನಗರದಲ್ಲಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಯಿತು.
ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಮಾನ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಮುಸ್ಲಿಂ ಲೀಗ್ ಮಂಜೇಶ್ವರ ಕ್ಷೇತ್ರದ ಅಧ್ಯಕ್ಷ ಟಿ.ಎ.ಮೂಸಾ, ಮುಸ್ಲಿಂಲೀಗ್ ಕಾರ್ಯದರ್ಶಿ ಅಝೀಝ್ ಮರಿಕೆ, ಉಪಾಧ್ಯಕ್ಷ ಎಂ.ಬಿ.ಯೂಸಿಫ್ ಹಾಜಿ, ವಿವಿಧ ವಲಯಗಳ ಪ್ರಮುಖರಾದ ಹರ್ಷಾದ್ ವರ್ಕಾಡಿ, ಪಿ.ಎಂ.ಅಬ್ದುಲ್ ಕಾದರ್, ಕೆ.ಪಿ.ಮುಹಮ್ಮದ್ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ವಿ.ಹನೀಫ್, ಮಂಗಲ್ಪಾಡಿ ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಇರ್ಫಾನಾ ಇಕ್ಬಾಲ್, ಮುಹಮ್ಮದ್ ಉಪ್ಪಳ ಗೇಟ್, ಜಬ್ಬಾರ್ ಪಳ್ಳಂ, ಉಮ್ಮರ್ ಅಪೋಲೋ, ವಿವಿಧ ದೇವಾಲಯ, ಚರ್ಚ್ ಮತ್ತು ಮಸೀದಿ ಸಮಿತಿಯ ಪದಾಧಿಕಾರಿಗಳು, ವಿವಿಧ ಸ್ವಯಂಸೇವಾ ಸಂಸ್ಥೆಗಳು ಮತ್ತು ಕ್ಲಬ್‍ಗಳು ಮುಷ್ಕರ ಬೆಂಬಲಿಸಿ ಮಾತನಾಡಿದರು. ಯೂಸಿಫ್ ಫೈನ್‍ಗೋಲ್ಡ್, ಅಶ್ರಫ್ ಕಸಬ, ಮೂಸಾ ಕೆ.ಎಸ್, ಮೋನಿ, ಇಬ್ರಾಹಿಂ, ಸಲೀಂ ಉಜರೆ, ಮಾಮು ದರ್ಬಾರ್, ಅಫ್ಜಲ್, ಸತ್ತಾರ್, ಅಶ್ರಫ್ ಭಾಟಿಯಾ, ಬಿ.ಎಂ.ಮುಸ್ತಫಾ, ಅಲಿ ಕಸಬ, ಅಶ್ಪಕ್, ಹನೀಫ್ ಮತ್ತಿತರು ಧರಣಿಯ ನೇತೃತ್ವ ವಹಿಸಿದ್ದರು. ಸಂಚಾಲಕ ಅಬು ತಮಾಮ್ ಸ್ವಾಗತಿಸಿ, ಕೋಶಾಧಿಕಾರಿ ಹನೀಫ್ ವಂದಿಸಿದರು. ಮಂಗಳವಾರ ಬೆಳಿಗ್ಗೆ ಮೊದಲ ಸುತ್ತಿನ ಮುಷ್ಕರ ಕೊನೆಗೊಂಡಿತು.
ಅಂಡರ್ ಪಾಸ್ ಗೆ ಆಗ್ರಹಿಸಿ ಉಪ್ಪಳದಲ್ಲಿ ಆಹೋರಾತ್ರಿ ಧರಣಿ
0
ನವೆಂಬರ್ 08, 2022

.jpg)
