ಕಾಸರಗೋಡು: ಮಂಗಳೂರು ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾದ್ಯಂತ ಪೊಲೀಸರು ತಪಾಸಣೆ ಚುರುಕುಗೊಳಿಸಿದ್ದಾರೆ. ರೈಲು ಗಾಡಿಯಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದ್ದು, ಜಕಾಸರಗೋಡು ರಐಲ್ವೆ ನಿಲ್ದಾಣದಲ್ಲೂ ಬಿಗು ಕಟ್ಟೆಚ್ಚರ ಪಾಲಿಸಲಾಗುತ್ತಿದೆ.
ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಕ್ವೇಡ್ ವಿಶೇಷ ತಪಾಸಣೆ ನಡೆಸುತ್ತಿದೆ. ಪೊಲೀಸ್ ಶ್ವಾನ ಚಾರ್ಲಿ ಸಹಾಯದೊಂದಿಗೆ ತಪಾಸಣೆ ನಡೆಸಲಾಗುತ್ತಿದೆ. ಮಂಜೇಶ್ವರದಿಂದ ತೃಕ್ಕರಿಪುರ ವರೆಗೆ ರೈಲುಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದ್ದು, ರೈಲ್ವೆ ಹಳಿಗಳ ಮೇಲೂ ನಿಗಾ ಇರಿಸಿಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಕೇರಳದ ಭಯೋತ್ಪಾದನಾ ನಿಗ್ರಹ ದಳ ಪೊಲೀಸರು ಮಂಗಳೂರಿಗೆ ತೆರಳಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾರಂಭಿಸಿದೆ.
ಮಂಗಳೂರು ಸ್ಪೋಟ: ಕಾಸರಗೋಡಿನಲ್ಲಿ ಕಟ್ಟೆಚ್ಚರ
0
ನವೆಂಬರ್ 21, 2022
Tags




.jpeg)
