HEALTH TIPS

ಆರು ವರ್ಷಗಳಲ್ಲಿ 130ರಿಂದ 97ಕ್ಕೆ ಇಳಿದ ತಾಯ್ತನಕ್ಕೆ ಸಂಬಂಧಿಸಿದ ಮರಣ ದರ

              ವದೆಹಲಿ:2014-16ರಲ್ಲಿ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ 130ರಷ್ಟಿದ್ದ ತಾಯ್ತನಕ್ಕೆ ಸಂಬಂಧಿಸಿದ ಮರಣ ಅನುಪಾತ (ಎಂಎಂಆರ್)ವು 2018-20ರಲ್ಲಿ 97ಕ್ಕೆ ಇಳಿದಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ (RGI) ಕಚೇರಿಯು ವಿಶೇಷ ಬುಲೆಟಿನ್ ವೊಂದರಲ್ಲಿ ತಿಳಿಸಿದೆ.

                     ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರಕಾರ ತಾಯ್ತನಕ್ಕೆ ಸಂಬಂಧಿಸಿದ ಮರಣವು ಮಹಿಳೆಯ ಗರ್ಭಾವಸ್ಥೆಯಲ್ಲಿ ಅಥವಾ ಗರ್ಭಪಾತದ 42 ದಿನಗಳೊಳಗೆ ಆಕಸ್ಮಿಕ ಅಥವಾ ಪ್ರಾಸಂಗಿಕ ಕಾರಣಗಳನ್ನು ಹೊರತುಪಡಿಸಿ ಗರ್ಭಾವಸ್ಥೆ ಅಥವಾ ಅದರ ನಿರ್ವಹಣೆಗೆ ಸಂಬಂಧಿಸಿದ ಕಾರಣಗಳಿಂದ ಸಂಭವಿಸುವ ಸಾವು ಆಗಿದೆ. ಒಂದು ಪ್ರದೇಶದಲ್ಲಿಯ ಎಂಎಂಆರ್ ಆ ಪ್ರದೇಶದಲ್ಲಿಯ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಮಾಪನವಾಗಿದೆ.

                  ದೇಶದಲ್ಲಿ ಎಂಎಂಆರ್ ಸುಧಾರಣೆಯಾಗಲು ನರೇಂದ್ರ ಮೋದಿ ಸರಕಾರವು ಕೈಗೊಂಡ ವಿವಿಧ ಆರೋಗ್ಯ ರಕ್ಷಣೆ ಉಪಕ್ರಮಗಳು ಕಾರಣವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ (Mansukh)ಮಾಂಡವೀಯ ಟ್ವೀಟಿಸಿದ್ದಾರೆ.

                ಆರ್ಜಿಐ ದತ್ತಾಂಶಗಳಂತೆ ಅಸ್ಸಾಮ್ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ ಅತ್ಯಂತ ಹೆಚ್ಚಿನ ಎಂಎಂಆರ್ (195) ಹೊಂದಿದ್ದರೆ ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (173) ಮತ್ತು ಉ.ಪ್ರದೇಶ (167) ರಾಜ್ಯಗಳಿವೆ. ಕೇರಳ ಅತ್ಯಂತ ಕಡಿಮೆ ಎಂಎಂಆರ್ (19) ಹೊಂದಿದೆ. ತೆಲಂಗಾಣ (43) ಮತ್ತು ಮಹಾರಾಷ್ಟ್ರ (33) ಕೇರಳಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ.

                  ಸಂತಾನೋತ್ಪತ್ತಿ ವಯಸ್ಸಿನ ಹಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ಅಥವಾ ಗರ್ಭಪಾತದ ನಂತರದ ತೊಂದರೆಗಳಿಂದ ಸಾವನ್ನಪ್ಪುತ್ತಾರೆ ಎಂದು ವಿಶೇಷ ಬುಲೆಟಿನ್ ತಿಳಿಸಿದೆ.

                  ವಿಶ್ವಸಂಸ್ಥೆಯು ನಿಗದಿಗೊಳಿಸಿರುವ ಸುಸ್ಥಿರ ಅಭಿವೃದ್ಧಿಗಳ ಗುರಿಯು ಜಾಗತಿಕ ಎಂಎಂಆರ್ನ್ನು ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ 70ಕ್ಕೂ ಕಡಿಮೆ ಮಟ್ಟಕ್ಕೆ ತಗ್ಗಿಸುವ ಉದ್ದೇಶವನ್ನು ಹೊಂದಿದೆ.

               ಗೃಹ ಸಚಿವಾಲಯದ ಅಧೀನದಲ್ಲಿರುವ ಆರ್ಜಿಐ ಜನಗಣತಿ ನಡೆಸುವ ಹಾಗೂ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆಯ ಜೊತೆಗೆ ಮಾದರಿ ನೋಂದಣಿ ವ್ಯವಸ್ಥೆಯನ್ನು ಬಳಸಿಕೊಂಡು ಫಲವತ್ತತೆ ಮತ್ತು ಮರಣಗಳ ಕುರಿತು ಅಂದಾಜನ್ನು ಒದಗಿಸುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries