HEALTH TIPS

ಗುಜರಾತ್ ವಿಧಾನಸಭೆ ಚುನಾವಣೆ: ಮೊದಲ ಹಂತದಲ್ಲಿ ಶೇ 57ರಷ್ಟು ಮತದಾನ

 

               ಅಹಮದಾಬಾದ್‌: ಗುಜರಾತ್ ವಿಧಾನಸಭೆಗೆ ಇಂದು (ಗುರುವಾರ) ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 56.88 ರಷ್ಟು ಮತದಾನವಾಗಿದೆ.

               ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆವರೆಗೂ ನಡೆಯಿತು. ಮೊದಲ ಹಂತದಲ್ಲಿ ಒಟ್ಟಾರೆ ಶೇ 56.88 ರಷ್ಟು ಮತದಾನವಾಗಿದೆ.

ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ. 

            2017ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಕಡಿಮೆ ಮತದಾನವಾಗಿದೆ. 2017ರಲ್ಲಿ ಶೇ 68 ರಷ್ಟು ಮತದಾನವಾಗಿತ್ತು.

                 ಸೌರಾಷ್ಟ್ರ, ಕಛ್, ರಾಜ್ಯದ ದಕ್ಷಿಣ ಭಾಗ ಒಳಗೊಂಡ 19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಮತದಾನ ನಡೆದಿದೆ. 70 ಮಹಿಳೆಯರು ಸೇರಿ ಒಟ್ಟಾರೆ 788 ಅಭ್ಯರ್ಥಿಗಳು ಕಣದಲ್ಲಿದ್ದರು.

                   ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ 36 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 339 ಪಕ್ಷೇತರ ಅಭ್ಯರ್ಥಿಗಳೂ ಸ್ಪರ್ಧೆ ಮಾಡಿದ್ದಾರೆ.

                    ಎಎ‍ಪಿ ಮುಖ್ಯಮಂತ್ರಿ ಅಭ್ಯರ್ಥಿ ಈಸುದಾನ್ ಗಢವಿ, ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ, ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ ರಿವಾ ಜಡೇಜ, ಶಾಸಕರಾದ ಹರ್ಷ ಸಂಘವಿ, ಪೂರ್ಣೇಶ್ ಮೋದಿ, ಪುರುಷೋತ್ತಮ್ ಸೋಳಂಕಿ
ಅವರು ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖರಾಗಿದ್ದಾರೆ.

                 ರಾಜ್ಯದ ಒಟ್ಟು 4.91 ಕೋಟಿ ಮತದಾರರ ಪೈಕಿ ಸುಮಾರು 2 ಕೋಟಿ ಜನರು ಮತ ಚಲಾವಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದೇ 5ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 8ರಂದು ಮತ ಎಣಿಕೆ ನಡೆಯಲಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries