HEALTH TIPS

ಎಲ್ಲ ಸಚಿವಾಲಯ, ಇಲಾಖೆಗಳಲ್ಲಿನ 15 ವರ್ಷದಷ್ಟು ಹಳೆಯ ವಾಹನಗಳು ಗುಜರಿಗೆ: ಸರ್ಕಾರ

                  ವದೆಹಲಿ: ರಿಪೇರಿ ಮಾಡಲು ಅಸಾಧ್ಯವಾಗಿರುವ 15 ವರ್ಷದಷ್ಟು ಹಳೆಯ ವಾಹನಗಳನ್ನು ಗುಜರಿಗೆ (Scrap) ಹಾಕಲು ಎಲ್ಲ ಸಚಿವಾಲಯ ಮತ್ತು ಇಲಾಖೆಗಳಿಗೆ ಹಣಕಾಸು ಸಚಿವಾಲಯ ಸೂಚಿಸಿದೆ ಎಂದು ndtv.com ವರದಿ ಮಾಡಿದೆ.

                     ಈ ಕುರಿತು ಹಣಕಾಸು ಸಚಿವಾಲಯದಡಿ ಕಾರ್ಯ ನಿರ್ವಹಿಸುವ ವೆಚ್ಚ ಇಲಾಖೆಯು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಮಾಲಿನ್ಯ ನಿಯಂತ್ರಣ, ಪ್ರಯಾಣಿಕರ ಸುರಕ್ಷತೆಯ ಸುಧಾರಣೆ ಮತ್ತು ಇಂಧನ ದಕ್ಷತೆ ಕುರಿತ ಸರ್ಕಾರದ ವಿಶಾಲ ದೃಷ್ಟಿಕೋನವನ್ನು ಪರಿಗಣಿಸಿ, ನೀತಿ ಆಯೋಗ ಮತ್ತು ಭೂಸಾರಿಗೆ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ ಅಸ್ತಿತ್ವದಲ್ಲಿರುವ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಮರು ಪರಿಶೀಲಿಸಬೇಕು ಎಂದು ಸೂಚಿಸಿದೆ‌.

                 "ಭಾರತ ಸರ್ಕಾರದ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಸೇರಿರುವ ಎಲ್ಲ ಕೆಟ್ಟಿರುವ (ಅವಧಿಗೂ ಮುಂಚೆಯೆ ಕೆಟ್ಟಿರುವ ವಾಹನಗಳೂ ಸೇರಿ) ವಾಹನಗಳನ್ನು ಇನ್ನು ಮುಂದೆ ಗುಜರಿಗೆ ಹಾಕಬೇಕು ಎಂದು ತೀರ್ಮಾನಿಸಲಾಗಿದೆ" ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

                    ವಾಹನಗಳನ್ನು ಪುಡಿ ಮಾಡುವ ಸೌಲಭ್ಯ ಹೊಂದಿರುವ ನೋಂದಾಯಿತ ಘಟಕಗಳಲ್ಲಿ ಮಾತ್ರ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ. ಈಗಾಗಲೇ ಕೆಟ್ಟು ನಿಂತಿರುವ ಅಥವಾ 15 ವರ್ಷ ಪೂರೈಸಿರುವ ವಾಹನಗಳನ್ನು ಹರಾಜು ಹಾಕಲಾಗುವುದಿಲ್ಲ ಎಂದು ಹೇಳಲಾಗಿದೆ.

                ಇಂತಹ ವಾಹನಗಳನ್ನು ಪುಡಿಗಟ್ಟುವ ವಿವರವಾದ ವಿಧಾನದ ಕುರಿತು ಭೂಸಾರಿಗೆ ಸಚಿವಾಲಯದಿಂದ ಪ್ರತ್ಯೇಕ ಅಧಿಸೂಚನೆ ಹೊರ ಬೀಳಲಿದೆ ಎಂದು ವೆಚ್ಚ ಇಲಾಖೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries