HEALTH TIPS

ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ತವರು ನೆಲ ಕುಂಬಳೆ ಅನಂತಪುರದಲ್ಲಿ ಯಕ್ಷದಿಗ್ಗಜ ಬಣ್ಣದ ಮಹಾಲಿಂಗರ ಸಂಸ್ಮರಣೆ ಡಿ. 18 ರಂದು:ಬಣ್ಣದ ಮಾಲಿಂಗ ಯಕ್ಷ ಪ್ರಶಸ್ತಿ ನಗ್ರಿ ಮಹಾಬಲ ರೈಗೆ


          ಕುಂಬಳೆ: ಯಕ್ಷಗಾನದ ಬಣ್ಣದ ವೇಷಗಳಲ್ಲಿ ಸರಿಸುಮಾರು ಏಳು ದಶಕಗಳ ಕಾಲ ಮಿಂಚಿದ ಅದ್ಫುತ ಕಲಾವಿದ ಶ್ರೀ ಬಣ್ಣದ ಮಹಾಲಿಂಗ ಸಂಪಾಜೆಯವರ ನೆನಪಿನಲ್ಲಿ 2017ರಲ್ಲಿ ಪುತ್ತೂರನ್ನು ಕೇಂದ್ರವಾಗಿರಿಸಿ ಸ್ಥಾಪಿಸಲ್ಟಟ್ಟ ಬಣ್ಣದ ಮಹಾಲಿಂಗ ಯಕ್ಷ ಪ್ರತಿμÁ್ಠನದ ಆರನೆಯ ವರ್ಷದ ಕಾರ್ಯಕ್ರಮವು 18.12.2022 ನೇ ಆದಿತ್ಯವಾರ ಪೂರ್ವಾಹ್ಣ 10.30 ರಿಂದ ಕುಂಬಳೆ ಅನಂತಪುರ ಅನಂತಶ್ರೀ ಸಭಾಂಗಣದಲ್ಲಿ ನೆರವೇರಲಿರುವುದು.
        ಪೂರ್ವಾಹ್ಣ 10.30ಕ್ಕೆ ಪ್ರತಿμÁ್ಠನದ ಅಧ್ಯಕ್ಷ  ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಕಾಸರಗೋಡಿನ ಹಿರಿಯ ಉದ್ಯಮಿ  ಕೆ ಸುರೇಶ್ ಬಟ್ಟಂಪಾರ ಉದ್ಘಾಟಿಸುವರು. ಹಿರಿಯ ಯಕ್ಷಗಾನ ಕಲಾವಿದರೂ ಬಣ್ಣದ ಮಹಾಲಿಂಗರ ಒಡನಾಡಿಗಳೂ ಆದ  ಕುಂಬಳೆ ಶ್ರೀಧರ ರಾವ್ ಬಣ್ಣದ ಮಹಾಲಿಂಗರವರ ಸಂಸ್ಮರಣೆಯನ್ನು ಮಾಡುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳು ಮತ್ತು ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಯಜಮಾನರಾದ ಶ್ರೀಕೃಷ್ಣಯ್ಯ ಅನಂತಪುರ ಭಾಗವಹಿಸುವರು. ಅನಂತಪುರ ದೇವಸ್ಥಾನದ ಅಧ್ಯಕ್ಷ ನ್ಯಾಯವಾದಿ  ಉದಯಕುಮಾರ್ ಗಟ್ಟಿ ಶುಭಾಶಂಸನೆಗೈಯುವರು.



        ಸಮಾರಂಭದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ತೆಂಕುತಿಟ್ಟಿನ ಪ್ರಸಿದ್ಧ ಹಿರಿಯ ಬಣ್ಣದ ವೇಷಧಾರಿಗಳಾದ ಮಹಿμÁಸುರ ಖ್ಯಾತಿಯ ನಗ್ರಿಗುತ್ತು ಮಹಾಬಲ ರೈಯವರಿಗೆ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಮಲ್ಲ ಮೇಳದ ಹಿರಿಯ ಕಲಾವಿದರಾದ  ಎಡನೀರು ಮಾಧವರವರನ್ನು ಸನ್ಮಾನಿಸಲಾಗುವುದು. ಕಣಿಪುರ ಪತ್ರಿಕೆಯ ಸಂಪಾದಕರಾದ ಎಂ ನಾ ಚಂಬಲ್ತಿಮಾರ್ ಅಭಿನಂದನಾ ಭಾಷಣ ಮಾಡುವರು. ಪ್ರತಿμÁ್ಠನದ ಗೌರವಾಧ್ಯಕ್ಷರುಗಳಾದ ಸುಬ್ರಾಯ ಸಂಪಾಜೆ ಮತ್ತು ನಿವೃತ್ತ ಉಪತಹಶೀಲ್ದಾರ್ ಮಹಾಲಿಂಗ ಮಂಗಳೂರು, ಗೌರವ ಸಲಹೆಗಾರರಾದ  ರಾಮ ಮುಗ್ರೋಡಿ ಮತ್ತು ಕೆ ಸಿ ಪಾಟಾಳಿ ಪಡುಮಲೆ ಉಪಸ್ಥಿತರಿರುವರು. ಅಪರಾಹ್ಣ 1.30 ರಿಂದ ಪರಂಪರೆಯ ಮೇಳೈಸುವಿಕೆಯೊಂದಿಗೆ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ,  ಹೊಸಮೂಲೆ ಗಣೇಶ ಭಟ್ ಮತ್ತು  ತಲ್ಪಣಾಜೆ ವಂಕಟ್ರಮಣ ಭಟ್ಟರ ಸಾರಥ್ಯದಲ್ಲಿ ಸುಪ್ರಸಿದ್ಧ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ದಕ್ಷಯಜ್ಞ, ಗಿರಿಜಾ ಕಲ್ಯಾಣ ಮತ್ತು ದೊಂದಿ ಬೆಳಕಿನಲ್ಲಿ ದುಶ್ಶಾಸನ ವಧೆ ಹಾಗೂ ವೃಷಸೇನ ಕಾಳಗ ಯಕ್ಷಗಾನ ಬಯಲಾಟವು ನಡೆಯಲಿದೆ. ಯಕ್ಷಗಾನದ ಬಣ್ಣದ ವೇಷ ಮತ್ತು ಪರಂಪರೆಗೆ ಹೆಚ್ಚಿನ ಒತ್ತು ಕೊಟ್ಟು ಆಯೋಜಿಸಲಾದ ಈ ಕಾರ್ಯಕ್ರಮಗಳು ಅನೇಕ ಪ್ರತ್ಯೇಕತೆಗಳೊಂದಿಗೆ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ, ಬಣ್ಣದ ಮಹಾಲಿಂಗರ ವ್ಯಕ್ತಿತ್ವದ ಅನಾವರಣಕ್ಕೆ ಪೂರಕವಾಗಿ ನಡೆಯಲಿವೆ. ಆ ಮೂಲಕ ಯಕ್ಷರಂಗದ ದಿಗ್ಗಜರೊಬ್ಬರ ಔಚಿತ್ಯಪೂರ್ಣ ಸಂಸ್ಮರಣೆಯು ನಡೆಯಲಿದೆ.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries