ಕಾಸರಗೋಡು: ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಘಿ ಡಿ.23ರಂದು ಬೆಳಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ಹೈಯರ್ ಸೆಕೆಂಡರಿ ವಿಭಾಗಕ್ಕೆ ಪ್ರಬಂಧ ಸ್ಪರ್ಧೆ ಮತ್ತು ಕಾಲೇಜು ವಿಭಾಗಕ್ಕೆ ಭಾಷಣ ಸ್ಪರ್ಧೆ ನಡೆಸಲಾಗುವುದು. ಸ್ಪರ್ಧೆಗಳು ಹಸಿರು ಬಳಕೆ, ನ್ಯಾಯೋಚಿತವಾದ ಡಿಜಿಟಲ್ ಹಣಕಾಸು ಮತ್ತು ಗ್ರಾಹಕ ನಿಯಮಗಳು-ಹಕ್ಕುಗಳು- ಕರ್ತವ್ಯಗಳಿಗೆ ಸಂಬಂಧಿಸಿ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255138.)ಸಂಪರ್ಕಿಸುವಂತೆಪ್ರಕಟಣೆ ತಿಳಿಸಿದೆ.
ಗ್ರಾಹಕರ ದಿನಾಚರಣೆ: ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು.
0
ಡಿಸೆಂಬರ್ 15, 2022
Tags




_1623326746619_1623326756181.jpg)
