ಕಾಸರಗೋಡು: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ನೇತೃತ್ವದಲ್ಲಿ ಮೇಲ್ಪರಂಬ ಪೆÇಲೀಸ್ ಠಾಣೆಯಲ್ಲಿ ನಡೆದ 'ಆಪರೇಷನ್ ಪೀಸ್' ಅದಾಲತ್ ನಲ್ಲಿ 19 ದೂರುಗಳನ್ನು ಸ್ವೀಕರಿಸಲಾಗಿದೆ. ಶಾಲೆಯನ್ನು ಸೂಚಿಸುವ ರಸ್ತೆ ಫಲಕ ಮತ್ತು ಶಾಲೆಯ ಸುತ್ತಲಿನ ರಸ್ತೆಯಲ್ಲಿ ಜೀಬ್ರಾ ಕ್ರಾಸಿಂಗ್ ಲೈನ್ ಅಳವಡಿಸುವಂತೆ ಪೆÇಯಿನಾಚಿ ನೆಲ್ಲಿಯಡ್ಕದ ಭಾರತ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಬೇಡಿಕೆಯೊಂದಿಗೆ ಅದಾಲತ್‍ನಲ್ಲಿ ಪಾಲ್ಗೊಂಡರು. ಲಭಿಸಿದ ದೂರನ್ನು ಪಂಚಾಯಿತಿ ಅಧಿಕಾರಿಗಳು ಹಾಗೂ ರಸ್ತೆ ಸುರಕ್ಷತಾ ಇಲಾಖೆಗೆ ಹಸ್ತಾಂತರಿಸಲಾಯಿತು. ಆಪರೇಷನ್ ಪೀಸ್ ವೇಳೆ ಬಂದಿರುವ ಎಲ್ಲಾ 19 ದೂರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರವಾಸಿಗರು ಹೆಚ್ಚಾಗಿ ಬರುವ ಕೀಯೂರು ಬೀಚ್ ಮತ್ತು ಚಂದ್ರಗಿರಿ ಕೋಟೆಯಲ್ಲಿ ಪ್ರವಾಸೋದ್ಯಮ ಪೆÇಲೀಸರನ್ನು ನೇಮಿಸಬೇಕು ಎಂಬ ಆಗ್ರಹ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬೇಕಲ ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್ ದೂರುದಾರರಿಗೆ ಮನವರಿಕೆ ಮಾಡಿಕೊಟ್ಟರು. ನಿತ್ಯ ಅಪಘಾತಗಳು ಸಂಭವಿಸುವ ಕಳನಾಡು ಮತ್ತು ಬೆಂಡಿಚಾಲ್‍ನಲ್ಲಿ ಅಪಘಾತ ಕಡಿಮೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂಬ ಮನವಿಯ ಮೇರೆಗೆ ಕ್ರಮ ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರಿ, ಉದುಮಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಚೆಮ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ.ನಿಸಾರ್, ವ್ಯಾಪಾರಿಗಳು, ರಾಜಕೀಯ-ಸಾಮಾಜಿಕ-ಸಾಂಸ್ಕøತಿಕ-ಸ್ವಯಂಸೇವಕ ಸಂಘಟನೆ ಕಾರ್ಯಕರ್ತರು ಮತ್ತಿತರರು ಅದಾಲತ್‍ನಲ್ಲಿ ಪಾಲ್ಗೊಂಡಿದ್ದರು. ಬೇಕಲ ಡಿವೈಎಸ್ಪಿ ಸಿ.ಕೆ. ಸುನೀಲ್ ಕುಮಾರ್ ಸ್ವಾಗತಿಸಿದರು. ಮೇಲ್ಪರಂಬ ಠಾಣೆ ಇನ್ಸ್‍ಪೆಕ್ಟರ್ ಟಿ.ಉತ್ತಮದಾಸ್ ವಂದಿಸಿದರು.
'ಆಪರೇಷನ್ ಪೀಸ್'-ಜಿಲ್ಲಾ ಪೋಲೀಸ್ ಮುಖ್ಯಸ್ಥರ ಅದಾಲತ್‍ನಲ್ಲಿ 19 ದೂರುಗಳ ಪರಿಗಣನೆ
0
ಡಿಸೆಂಬರ್ 16, 2022

