ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ, ಶ್ರೀ ವಿದ್ಯಾವರ್ಧಕ ಸಂಘ ಇವರಿಂದ ರೂಪುಗೊಂಡ ವಿದ್ಯೆ,ಕಲೆ,ಸಾಂಸ್ಕøತಿಕ ಚಟುವಟಿಕೆಗಳಿಗೆ ಮೀಸಲಾದ ಸಂಘಟನೆ “ವಿಕಾಸ” ಇದರ ಉದ್ಘಾಟನೆಯು ಡಿ. 20 ರಂದು ಮಂಗಳವಾರ ಸಂಜೆ 5.15ಕ್ಕೆ ಮೀಯಪದವು ಹೈಯರ್ ಸೆಕೆಂಡರಿ ಶಾಲಾ ವಠಾರದಲ್ಲಿ ಜರಗಲಿದೆ.
ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಇತ್ತೀಚೆಗೆ ಬಾಳಿಯೂರಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಸಮಾರಂಭದಲ್ಲಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೊಡಿ, ಅರಸುಸಂಕಲ ದೈವಕ್ಷೇತ್ರ ಸಂತಡ್ಕ ಸೇವಾ ಸಮಿತಿ ಅಧ್ಯಕ್ಷ ಡಾ.ಶ್ರೀಧರ ಭಟ್, ಮುತ್ತು ಶೆಟ್ಟಿ ಬಾಳಿಯೂರು, ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ವಿದ್ಯಾವರ್ಧಕ ಹೈಯರ್ ಸೆಕೆಂಡರಿ ವಿದ್ಯಾಸಂಸ್ಥೆಯ ಶಿಕ್ಷಕರಾದ ರಾಜಾರಾಮ ರಾವ್ ಮೀಯಪದವು, ಕಿರಣ್ ಕುದ್ರೆಕೋಡ್ಲು ಉಪಸ್ಥಿತರಿದ್ದರು.
ಡಿ.20.ಮೀಯಪದವಿನಲ್ಲಿ ‘ವಿಕಾಸ’ ಉದ್ಘಾಟನೆ ಆಮಂತ್ರಣ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 16, 2022
Tags




.jpg)
