ಮಧೂರು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ 90 ನೇ ವಾರ್ಷಿಕ ಸಂಭ್ರಮ ಮತ್ತು ಮಹಿಳಾ ಸಮಾವೇಶದ ಅಂಗವಾಗಿ ಕೂಡ್ಲು ಗೋಪಾಲಕೃಷ್ಣ ಪ್ರೌಢ ಶಾಲಾ ಮೈದಾನದಲ್ಲಿ ಕ್ರೀಡಾ ಕೂಟ ಜರಗಿತು.
ಕಾರ್ಯಕ್ರಮವನ್ನು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದರು. ಯುವ ಸಂಘದ ಅಧ್ಯಕ್ಷ ಅಕ್ಷತ್, ಕ್ರೀಡಾ ಕೂಟದ ಸಂಚಾಲಕ ಪಾಂಡುರಂಗ, ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ದೋಣಿಬಾಗಿಲು, ಕೋಶಾಧಿಕಾರಿ ಸತೀಶ್ ಮಾಸ್ತರ್, ಚಂದ್ರಶೇಖರ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಕ್ರೀಡಾಕೂಟ
0
ಡಿಸೆಂಬರ್ 16, 2022
Tags




.jpg)
