ಕಾಸರಗೋಡು: ಪ್ರೆಸ್ ಕ್ಲಬ್ ವತಿಯಿಂದ ಹಿರಿಯ ಪತ್ರಕರ್ತ, ಪ್ರೆಸ್‍ಕ್ಲಬ್ ಮಾಜಿ ಅಧ್ಯಕ್ಷ ಕೆ.ಎಂ.ಅಹಮದ್ ಸಂಸ್ಮರಣೆ ಮತ್ತು ಕೆ.ಎಮ ಅಹಮ್ಮದ್ ಸಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಜರುಗಿತು.
ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್ ಸಮಾರಂಭ ಉದ್ಘಾಟಿಸಿದರು. ಮಾತೃಭೂಮಿ ಕೋಯಿಕ್ಕೋಡ್ ಘಟಕದ ರಮ್ಯಾ ಹರಿಕುಮಾರ್ ಅವರಿಗೆ ಕೆ.ಎಂ.ಅಹಮದ್ ಸ್ಮಾರಕ ಪ್ರಶಸ್ತಿ ಯನ್ನು ಶಾಸಕ ಎಂ. ರಾಜಗೋಪಾಲನ್ ಪ್ರದಾನ ಮಾಡಿದರು. ಪ್ರಶಸ್ತಿಯು ಫಲಕ ಹಾಗೂ 10,001 ರೂ. ನಗದು ಒಳಗೊಂಡಿದೆ. ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಮ್ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ಪಿ.ಎಂ.ಅತೀರ ಅವರು 'ಮಾಧ್ಯಮ ಮತ್ತು ಲಿಂಗ ಸಮಾನತೆಯ ರಾಜಕೀಯವೂ'ಎಂಬ ವಿಷಯದ ಕುರಿತು ಕುರಿತು ಉಪನ್ಯಾಸ ನೀಡಿದರು. ಪ್ರದೀಪ್ ನಾರಾಯಣನ್ ಪ್ರಶಸ್ತಿ ಪುರಸ್ಕøತರ ಪರಿಚಯ ನೀಡಿದರು. ಡಾ.ಪಿ.ಕೆ.ರಾಜಶೇಖರನ್, ಮುಜೀಬ್ ಅಹ್ಮದ್ ಮತ್ತು ನಹಾಸ್ ಪಿ ಮುಹಮ್ಮದ್ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿದ ರಮ್ಯಾ ಹರಿಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ ಸ್ವಾಗತಿಸಿದರು. ಕೋಶಾಧಿಕಾರಿ ಶೈಜು ಪಿಲಾತ್ತರ ವಂದಿಸಿದರು.
ಕಾಸರಗೋಡು ಪ್ರೆಸ್‍ಕ್ಲಬ್‍ನಿಂದ ಕೆ.ಎಂ ಅಹಮ್ಮದ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದನ ಸಮಾರಂಭ
0
ಡಿಸೆಂಬರ್ 16, 2022
Tags





