ಕಾಸರಗೋಡು: ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕಾಲಜಿ(ಎಂಐಒ)ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಜನರಿಗೆ ನಿರಂತರವಾಗಿ ಕ್ಯಾನ್ಸರ್ ಬಗೆಗಿನ ಅರಿವು ಮೂಡಿಸುವುದರ ಜತೆಗೆ ನವೀನ ವಿಧಾನದ ತಂತ್ರಾಶಆಧಾರಿತ ಚಿಕಿತ್ಸಾ ಕ್ರಮಗಳನ್ನು ನಡೆಸುತ್ತಿರುವುದಾಗಿ ಆಸ್ಪತ್ರೆ ನಿರ್ದೇಶಕ ಡಾ. ಸುರೇಶ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕ್ಯಾನ್ಸರ್ ತಜ್ಞರ ದ್ರಷ್ಟಿಕೋನದಲ್ಲಿ ಯುವ ರೋಗಿಗಳಿಗಿಂತ ಹಿರಿಯ ನಾಗರಿಕರಿಗೆ ಕ್ಯನ್ಸರ್ ಚಿಕಿತ್ಸೆ ನೀಡುವುದು ಜಟಿಲ ಮತ್ತು ಬಹಳಷ್ಟು ಸವಾಲಿನ ಕೆಲಸವಾಗುತ್ತಿದೆ.
ಹಿರಿಯ ನಾಗರಿಕರಲ್ಲಿ ಕ್ಯಾನ್ಸರ್ ಎಂದರೆ ಸಾವು ನಿಶ್ಚಿತ ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವುದರ ಜೊತೆ ಹಿರಿಯರ ಸಮರ್ಥ ಆಶಾಕಿರಣವಾಗಿ ಮೂಡಿಬಂದಿದೆ. ಎಂಐಒ ವಯೋಸಹಜ ಕ್ಯಾನ್ಸರ್ ಭಾಧಿತರಿಗೆ ಅಂತಾರಾಷ್ಟ್ರೀಯ ಪ್ರಾಮಾಣೀಕೃತ ಮಾನದಂಡದ ಜತೆಗೆ ಇದರ ಮಾರ್ಗಸೂಚಿ ಕೈಪಿಡಿಯ ಅನುಗುಣವಾಗಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದೆ. 55 ವರ್ಷದಿಂದ ತೊಡಗಿ 70 ವರ್ಷದ ವರೆಗಿನ ವ್ಯಕ್ತಿಗಳಿಗೆ ಅವರ ವಯಸ್ಸಿಗನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ನಿಗದಿತ ಪ್ರಮಾಣ ಆಧಾರಿತ ಅನುಕ್ರಮ, ಚಿಕಿತ್ಸಾ ವೇಳಾಪಟ್ಟಿಯ ಜತೆ ಕ್ಯಾನ್ಸರ್ ತಜ್ಞರು, ಸಾಮಾನ್ಯ ರೋಗ ತಜ್ಞರು,ಕ್ಯಾನ್ಸರ್ ಶುಶ್ರೂಷಕರು,ಮನಶಾಸ್ತ್ರಜ್ಞರು, ವೈದ್ಯಕೀಯ ಸಮಾಜ ಸೇವಾ ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತಾರೆ. ಎಂ.ಐ.ಒ ದಲ್ಲಿ ಕಳೆದ ಮೂರು ತಿಂಗಳಲ್ಲಿ ಚಿಕಿತ್ಸೆ ಪಡೆದ ಹಿರಿಯ ನಾಗರಿಕರ ಪೈಕಿ 80 ಮತ್ತು 90ರ ವಯೋಮಾನದ ಕ್ಯಾನ್ಸರ್ ಭಾದಿತ 100 ರಷ್ಟು ಹಿರಿಯರಿಗೆ ಅತ್ಯುತ್ತಮ ಫಲಿತಾಂಶದೊಂದಿಗೆ ವ್ಯಕ್ತಿಕೇಂದ್ರಿತ ಹಾಗೂ ಸಮಗ್ರ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸಾನಂತರ ಅವಧಿ ಜತೆಗೆ ಅವರ ಜೀವನ ಗುಣಮಟ್ಟ ಇವುಗಳ ಸಮಗ್ರ ನಿರ್ವಹಣೆಯನ್ನು ಕೂಡಾ ಎಂಐಒ ಯಶಸ್ವಿಯಾಗಿ ಮಾಡುತ್ತಾ ಬರುತ್ತಿದೆ ಎಂದು ಡಾ.ಸುರೇಶ್ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ಸಿ.ಓ.ಓ ಡಾ. ಲಾಲ್ ಪಿ. ಮಡತ್ತಿಲ್ ಉಪಸ್ಥಿತರಿದ್ದರು.
ಅರ್ಬುದ ರೋಗದ ಬಗ್ಗೆ ಜಾಗೃತಿ ಜತೆಗೆ ತಂತ್ರಾಂಶ ಆಧಾರಿತ ಚಿಕಿತ್ಸೆ: ಎಂ.ಐ.ಒ
0
ಡಿಸೆಂಬರ್ 16, 2022
Tags





