ಕಾಸರಗೋಡು: ಬ್ಯಾಂಕಿಂಗ್ ಅಭಿವೃದ್ಧಿಯ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ 2022-23ನೇ ಸಾಲಿನ ಎರಡನೇ ತ್ರೈಮಾಸಿಕ ಸಭೆ ಕಾಸರಗೋಡಿನಲ್ಲಿ ಜರುಗಿತು. ಸಹಾPಯಕ ಜಿಲ್ಲಾಧಿಕಾರಿ ಸಿರೋಜ್ ಪಿ. ಜಾನ್ ಸಮಾರಂಭ ಉದ್ಘಾಟಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್‍ನ ಎಜಿಎಂ ಪ್ರದೀಪ್ ಮಾಧವ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಕಾಸರಗೋಡು ಪ್ರಾದೇಶಿಕ ಪ್ರಬಂಧಕ ಶಶಿಧರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಬಾರ್ಡ್ ಡಿಡಿಎಂ ಕೆಬಿ ದಿವ್ಯಾ ಪ್ರಾಥಮಿಕ ವಲಯದ ಸಾಧನೆಗಳ ಬಗ್ಗೆ ಅವಲೋಕನ ನಡೆಸಿದರು. ಕೃಷಿ ಸೇರಿದಂತೆ ಪ್ರಾಥಮಿಕ ವಲಯದ ಎರಡನೇ ತ್ರೈಮಾಸಿಕದಲ್ಲಿ ಶೇ.59.54ರಷ್ಟು ಬೆಳವಣಿಗೆ ದಾಖಲಿಸಿದೆ. ದ್ವಿತೀಯ ವಲಯದಲ್ಲಿ ಶೇ.57.16 ಮತ್ತು ತೃತೀಯ ವಲಯದಲ್ಲಿ ಶೇ.14.94ರಷ್ಟು ಸಾಧನೆ ದಾಖಲಿಸಿರುವುದಾಗಿ ಅಂದಾಜಿಸಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಕೈಗೊಳ್ಳಬೇಕಾದ ಕೆಲಸಕಾರ್ಯಗಳು ಹಾಗೂ ಸಾಧನೆಗಳ ಬಗ್ಗೆಯೂ ಚರ್ಚಿಸಲಾಯಿತು. ಲೀಡ್ ಜಿಲ್ಲಾ ವ್ಯವಸ್ಥಾಪಕ ಎನ್.ವಿ.ಬಿಮಲ್ ಸ್ವಾಗತಿಸಿದರು. ಲೀಡ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಪಿ.ಪ್ರಭಾಕರನ್ ವಂದಿಸಿದರು.
ಬ್ಯಾಂಕಿಂಗ್ ಅಭಿವೃದ್ಧಿಯ ಜಿಲ್ಲಾ ಮಟ್ಟದ ಪರಿಶೀಲನಾ ತ್ರೈಮಾಸಿಕ ಸಭೆ
0
ಡಿಸೆಂಬರ್ 16, 2022
Tags




