HEALTH TIPS

2022ರಲ್ಲಿ ಭಾರತೀಯರು ಗೂಗಲ್​ನಲ್ಲಿ ಹುಡುಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

 

             ಬೆಂಗಳೂರು: ಭಾರತದ ಜನಸಂಖ್ಯೆ 135 ಕೋಟಿ ಇದೆ. ಬಹುತೇಕ ಎಲ್ಲರ ಕೈಯಲ್ಲೂ ಮೊಬೈಲ್​ ಫೋನ್​ ಇದ್ದೇ ಇರುತ್ತೆ. ಇನ್ನು ಗೂಗಲ್​ ಇಲ್ಲದ ಫೋನ್​ ಎಂದಾದರೂ ಕೇಳಿದ್ದೀರಾ? ಗೂಗಲ್​ ಇದ್ದೆಡೆ ಸರ್ಚ್​ ಹಿಸ್ಟರಿ ಇದ್ದೇ ಇರುವುದಯ್ಯಾ… ಹಾಗಾದರೆ ಈ ವರ್ಷ ಜನ ಏನೇನು ಸರ್ಚ್​​ ಮಾಡಿದ್ದಾರೆ?

               ಸುದ್ದಿ ಇಲ್ಲಿದೆ ನೋಡಿ

                ಗೂಗಲ್​ ಸಂಸ್ಥೆ ಪ್ರತೀ ವರ್ಷ ಜನರು ಏನೇನು ಹುಡುಕುತ್ತಾರೆ, ಎನ್ನುವುದರ ವಿಸ್ತೃತ ವರದಿ ತಯಾರಿಸಿ ಬಿಡುಗಡೆ ಮಾಡುತ್ತೆ. 2022ರಲ್ಲಿ ಭಾರತದಲ್ಲಿ ಜನರು ಏನೇನು ಹುಡುಕಿದ್ದಾರೆ ಎನ್ನುವುದರ ವದಿಯೂ ಬಿಡುಗಡೆ ಆಗಿದ್ದು ಜನ ಐಪಿಎಲ್​ ಬಗ್ಗೆ ಅತೀ ಹೆಚ್ಚು ಸರ್ಚ್​ ಮಾಡಿದ್ದಾರೆ. ಇನ್ನೂ ಮಜ ಏನೆಂದರೆ ಭಾರತದಲ್ಲಿ ಸರ್ಚ್​ ಆಗಿರುವ ಬಹುತೇಕ ಎಲ್ಲಾ ವಿಷಯಗಳೂ ಕ್ರೀಡೆಗೆ ಸಂಬಂಧಿಸಿದ್ದೇ! ಎರಡನೆ ಸ್ಥಾನದಲ್ಲಿ 'ಕೋವಿನ್​ ವ್ಯಾಕ್ಸೀನ್​' ಇದ್ದು ಮೂರನೇ ಸ್ಥಾನದಲ್ಲಿ ಫೀಫಾ ವರ್ಲ್ಡ್​​ ಕಪ್​ ಇದೆ. ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಏಷ್ಯಾ ಕಪ್​ ಹಾಗೂ ಐಸಿಸಿ ಟಿ20 ಬಗ್ಗೆ ಜನ ಹುಡುಕಿದ್ದಾರೆ.

              ಗೂಗಲ್​ ಪ್ರತೀ ವರ್ಷ ಬೇರೆ ಬೇರೆ ಕೆಟಗರಿಗಳ ಕೆಳಗೆ ಸರ್ಚ್​ ಹಿಸ್ಟರಿಯನ್ನು ಬಿಡುಗಡೆ ಮಾಡುತ್ತೆ. ಒಟ್ಟು 9 ಕೆಟಗರಿಗಳನ್ನು ಬಿಡುಗಡೆ ಮಾಡುವ ಗೂಗಲ್​ ಪ್ರಮುಖವಾಗಿ 'ವಾಟ್​ ಈಸ್​' ಮತ್ತು 'ಹೌ ಟು' ಕೆಟಗರಿಗಳನ್ನು ತೋರಿಸುತ್ತೆ.

                 ವಾಟ್​ ಈಸ್​ ಕೆಟಗರಿಯಲ್ಲಿ ಈ ವರ್ಷ ಜನರು ಅಗ್ನಿಪಥ್​ ಸ್ಕೀಮ್​ ಬಗ್ಗೆ ಅತೀ ಹೆಚ್ಚು ಸರ್ಚ್​ ಮಾಡಿದ್ದಾರೆ. ಇನ್ನು ಈ ಬಾರಿ ಭಾರತೀಯರು ರಷ್ಯಾ ಯೂಕ್ರೇನ್​ ಯುದ್ಧದಿಂದ ಜಾಗತಿಕ ವಿಷಯಗಳ ಕುರಿತು ಹುಡುಕಾಡುವ ಅಭ್ಯಾಸ ಹೆಚ್ಚಿಸಿಕೊಂಡಿದ್ದು ಸರ್ಚ್​ ಹಿಸ್ಟರಿಯಲ್ಲಿ ಎದ್ದು ಕಾಣುತ್ತಿದೆ. ಎರಡನೆ ಸ್ಥಾನವನ್ನು NATO ಪಡೆದುಕೊಂಡಿದ್ದು ಮೂರು ಮತ್ತು ನಾಲ್ಕನೆ ಸ್ಥಾನವನ್ನು NFT ಹಾಗೂ PFI ಪಡೆದುಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries