ಕಾಸರಗೋಡು : ಡಿಸೆಂಬರ್ 24 ರಿಂದ ಬೇಕಲ ತೀರದಲ್ಲಿ 10 ದಿನಗಳ ಕಾಲ ನಡೆಯುವ ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವ ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಿಎಚ್. ಕುಂಜಾಂಬು ಶಾಸಕ ಅಧ್ಯಕ್ಷತೆ ವಹಿಸುವರು.
ಬಂದರು ಪುರಾತತ್ವ ಮತ್ತು ಇತಿಹಾಸ, ವಸ್ತುಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರ್ ಕೋವಿಲ್ ರೋಬೋಟಿಕ್ ಶೋ ಮತ್ತು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು, ತ್ರಿಸ್ಥರ ಪಂಚಾಯತ್ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಪ್ರಮುಖ ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸುವರು.
ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಕಾರ್ಯದರ್ಶಿ ಕರಿವೆಳ್ಳೂರು ಮುರಳಿ ಸಾಂಸ್ಕೃತಿಕ ಉಪನ್ಯಾಸ ನೀಡಲಿದ್ದಾರೆ. ಅರಬ್ ರಾಷ್ಟ್ರಗಳ ಪ್ರತಿನಿಧಿಗಳು ಕಾರ್ಯಕ್ರಮದ ಭಾಗವಾಗಲಿದ್ದಾರೆ. 26ರಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, 27ರಂದು ಶಾಸಕ ಪಿ.ಕೆ.ಕುನ್ಹಾಲಿಕುಟ್ಟಿ, 28ರಂದು ಸಂತೋμï ಜಾರ್ಜ್ ಕುಳಂಗರ, 30ರಂದು ಕೃಷಿ ಸಚಿವ ಪಿ.ಪ್ರಸಾದ್, ಸಿ.ಜೆ.ಕುಟ್ಟಪ್ಪನ್, 31ರಂದು ಉನ್ನತ ಶಿಕ್ಷಣ ಇಲಾಖೆ ಸಚಿವೆ ಆರ್.ಬಿಂದು, ಸ್ಪೀಕರ್ ಎ.ಎನ್.ಶಂಸೀರ್, ಬಂದರು, ಕ್ರೀಡಾ ಸಚಿವ ವಿ. ಅಬ್ದುರ್ ರೆಹಮಾನ್ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪಿ.ಎ. ಮುಹಮ್ಮದ್ ರಿಯಾಝ್, ಸಂಸ್ಕೃತಿ ಸಚಿವ ವಿ.ಎನ್.ವಾಸವನ್ ಮತ್ತಿತರರು ಭಾಗವಹಿಸಲಿದ್ದಾರೆ. ಹತ್ತು ದಿನಗಳಲ್ಲಿ ಸುಮಾರು ಎರಡು ಸಾವಿರ ಕಲಾವಿದರು ಭಾಗವಹಿಸಲಿದ್ದಾರೆ.
ಹಬ್ಬದ ಟಿಕೆಟ್‍ಗಳನ್ನು ಕುಟುಂಬಶ್ರೀ ಮೂಲಕ ಮಾರಾಟ ಮಾಡಲಾಗುತ್ತದೆ. ಸಹಕಾರಿ ಬ್ಯಾಂಕ್‍ಗಳ ಮೂಲಕವೂ ಟಿಕೆಟ್‍ಗಳು ಲಭ್ಯವಿವೆ. ಟಿಕೆಟ್ ಗಾಗಿ ಬೀಚ್ ನಲ್ಲಿ ವಿಶೇಷ ಕೌಂಟರ್ ಸ್ಥಾಪಿಸಲಾಗುವುದು. ಉತ್ಸವದ ಪೂರ್ವಭಾವಿಯಾಗಿ ಡಿ.20ರಂದು ಮಧ್ಯಾಹ್ನ 3 ಗಂಟೆಗೆ ಪಳ್ಳಿಕ್ಕೆರೆÀ ಕಡಲತೀರದಲ್ಲಿ ನಡೆವÀ ವಿಸ್ತೃತ ಸಂಘಟನಾ ಸಮಿತಿ ಸಭೆಯಲ್ಲಿ ಘೋಷಣಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ನಿನ್ನೆ ಪಳ್ಳಿಕ್ಕೆರೆಯಲ್ಲಿ ನಡೆದ ಪೂರ್ವಭಾವೀ ವಿಸ್ಕøತ ಸಭೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್.ಕುಂಜಂಬು ತಿಳಿಸಿರುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಪಂಚಾಯತ್ ಅಧ್ಯಕ್ಷರಾದ ಪಿ. ಲಕ್ಷ್ಮಿ, ಎಂ.ಕುಮಾರನ್, ಬಿಆರ್‍ಡಿಸಿ ಎಂಡಿ ಪಿ.ಶಿಜಿನ್, ಹಕೀಂ ಕುನ್ನಿಲ್, ಕೆ.ಇ. ಎ. ಅಬೂಕರ್ ಮತ್ತಿತರರು ಭಾಗವಹಿಸಿದ್ದರು. ಸಭೆಯಲ್ಲಿ ಬೇಕಲ್ ಆರ್ಟ್ ಪ್ರಾಜೆಕ್ಟ್ ಕೂಡ ಆಯೋಜಿಸಲಾಗಿತ್ತು. ಸಿ.ಎಚ್.ಕುಂಜಂಬು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಚಿತ್ರ ಬಿಡಿಸುವ ಮೂಲಕ ಚಿತ್ರ ಗೋಡೆಯನ್ನು ಉದ್ಘಾಟಿಸಿದರು. ಕೇರಳ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಮುರಳಿ ಚೀರೋತ್, ಕಾರ್ಯದರ್ಶಿ ಎನ್.ಬಾಲಮುರಳಿ ಕೃಷ್ಣನ್ ಮತ್ತಿತರರು ಉಪಸ್ಥಿತರಿದ್ದರು.
ಬೇಕಲ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ 24ರಂದು ಆರಂಭ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟನೆ
0
ಡಿಸೆಂಬರ್ 11, 2022





