ಕುಂಬಳೆ: ಕಾನ ಶ್ರೀ ಶಂಕರನಾರಾಯಣ ಮಠದ ಜೀರ್ಣೋದ್ಧಾರ ಸಮಿತಿಯ ಆಶ್ರಯದಲ್ಲಿ ಕಾನ ಮಠದ ಜೀರ್ಣೋದ್ದಾರ ಸಮಿತಿಯ ವಿಶೇಷ ಮಹಾಭೆ ಡಿ. 18 ರಂದು ಭಾನುವಾರ ಪೂರ್ವಾಹ್ನ 9:30ಕ್ಕೆ ಬಲಿವಾಡು ಕೂಟದೊಂದಿಗೆ ಶ್ರೀ ಕಾನಮಠದಲ್ಲಿ ನೆರವೇರಲಿರುವುದು. ಈ ಬಗ್ಗೆ ನ. 27 ರಂದು ಕಾನಮಠದಲ್ಲಿ ನಡೆದ ಜೀರ್ಣೋದ್ಧಾರ ಸಮಿತಿ ಮತ್ತು ಹತ್ತುಸಮಸ್ತರಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಾನ ಮಠಕ್ಕೆ ಸೇರಿದ ಸರ್ವಭಕ್ತರು ಸಕಾಲಕ್ಕೆ ಹಾಜರಿದ್ದು ಸಭೆಯ ಕಾರ್ಯಸೂಚಿಗಳ ಚರ್ಚೆಯಲ್ಲಿ ಭಾಗವಹಿಸಿ ಜೀರ್ಣೋದ್ಧಾರ ಕಾರ್ಯಗಳು ಸಾಂಗವಾಗಿ ನೆರವೇರುವಂತೆ ಸಲಹೆ ಸೂಚನೆಗಳನ್ನು ಕೊಟ್ಟು ಸಭೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ಮಠದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕಾಕುಂಜೆ ಬಲರಾಮ ಭಟ್ ವಿನಂತಿಸಿದ್ದಾರೆ.
ಕಾನಮಠದಲ್ಲಿ ಜೀರ್ಣೋದ್ದಾರ ಸಮಿತಿ ವಿಶೇಷ ಮಹಾಸಭೆ 18 ರಂದು
0
ಡಿಸೆಂಬರ್ 11, 2022
Tags





