ಮುಳ್ಳೇರಿಯ: ಯಕ್ಷಗಾನದ ಮಹಾನ್ ಸಾಧಕ ಗುರು, ಪ್ರಸಂಗಕರ್ತೃ, ಅರ್ಥಧಾರಿ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣಾರ್ಥ ಕೊಡಲಾಗುತ್ತಿರುವ 2022ರ ಸಾಲಿನ ಕೀರಿಕ್ಕಾಡು ಪ್ರಶಸ್ತಿಯನ್ನು ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ಘೋಷಿಸಲಾಗಿದೆ.
ಕೋಳ್ಯೂರು ಎಂಬ ಹೆಸರಿನಿಂದಲೇ ಯಕ್ಷಗಾನ ವಲಯದಲ್ಲಿ ಮನೆಮಾತಾಗಿ ನೆಲೆನಿಂತಿರುವ ರಾಮಚಂದ್ರ ರಾಯರು ಸುದೀರ್ಘ ಕಾಲ ಶ್ರೇಷ್ಠ ಪಾತ್ರಧಾರಿಯಾಗಿ ರಂಗದಲ್ಲಿ ಮೆರೆದವರು. ಕೂಟಗಳಲ್ಲಿಯೂ ಭಾಗವಹಿಸಿದವರು. ‘90ರ ತಾರುಣ್ಯ’ದಲ್ಲಿ ಈಗಲೂ ಗರತಿಯ ವೇಷದಲ್ಲಿ ಸಾರ್ಥಕ್ಯವನ್ನು ತಂದುಕೊಡಬಲ್ಲ ಕಲಾವಂತಿಕೆಯನ್ನು ಹೊಂದಿದವರು. ಅವರ ಪರಿಪಕ್ವವೂ ಮೌಲಿಕವೂ ಆದ ಸಾಧನೆಯನ್ನು ಪರಿಗಣಿಸಿ ಕೀರಿಕ್ಕಾಡು ಪ್ರಶಸ್ತಿಯನ್ನು ಪ್ರದಾನ ಮಾಡಿ ಡಿ. 25 ರಂದು ಭಾನುವಾರ ನಡೆಯಲಿರುವ 78ನೆಯ ವಾರ್ಷಿಕೋತ್ಸವದಂದು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಳ್ಯೂರು ಅವರಿಗೆ ಕೀರಿಕ್ಕಾಡು ಪ್ರಶಸ್ತಿ
0
ಡಿಸೆಂಬರ್ 11, 2022
Tags




-kolyuru.jpg)
