ಕಾಸರಗೋಡು: ವಿಭಾಗೀಯ ಮಟ್ಟದ ಡಾಕ್ ಅದಾಲತ್ ಡಿಸೆಂಬರ್ 29 ರಂದು ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ವಿಭಾಗದ ಅಂಚೆ ಕಛೇರಿ ಅಧೀಕ್ಷಕರ ಕಛೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.
ಲೆಟರ್ ಪೆÇೀಸ್ಟ್, ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೆÇೀಸ್ಟ್, ಸೇವಿಂಗ್ಸ್ ಬ್ಯಾಂಕ್ ಇತ್ಯಾದಿ ಅಂಚೆ ಇಲಾಖೆಯ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಯಾವುದೇ ದೂರುಗಳಿದ್ದರೆ ಅದಾಲತ್‍ನಲ್ಲಿ ತಿಳಿಸಬಹುದಾಗಿದೆ. ಆ ದಿನ ನಡೆಯುವ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ಕಾಸರಗೋಡು ಅಂಚೆ ಕಛೇರಿಯನ್ನು ಸಂಪರ್ಕಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994 230885, 230746)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಡಿ.29ರಂದು ಕಾಸರಗೋಡು ವಲಯ ಡಾಕ್ ಅದಾಲತ್
0
ಡಿಸೆಂಬರ್ 14, 2022
Tags




