HEALTH TIPS

ಉದ್ಯೋಗ ದಂಧೆ: 4 ಆಫ್ರಿಕನ್ನರ ಬಳಿ 2 ಲಕ್ಷ ಇಮೇಲ್, 1 ಲಕ್ಷ ಮೊಬೈಲ್ ಸಂಖ್ಯೆ ಪತ್ತೆ

 

               ಮುಂಬೈ : ಉದ್ಯೋಗ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಪುಣೆಯಲ್ಲಿ ಬಂಧಿಸಲಾದ ನಾಲ್ವರು ಆಫ್ರಿಕನ್ನರ ಬಳಿ 2 ಲಕ್ಷ ಇಮೇಲ್ ಐಡಿ ಮತ್ತು ಒಂದು ಲಕ್ಷಕ್ಕೂ ಹೆಚ್ಚು ದೂರವಾಣಿ ಸಂಖ್ಯೆಗಳ ಡಾಟಾ ನೋಡಿ ಸೈಬರ್ ಪೊಲೀಸರು ಬೆಚ್ಚಿದ್ದಾರೆ.

                  ಬಂಧಿತರು ಜಾಂಬಿಯಾ, ಉಗಾಂಡಾ, ನಮೀಬಿಯಾ ಮತ್ತು ಘಾನಾದ ಪ್ರಜೆಗಳಾಗಿದ್ದು, ಇಬ್ಬರು ಮಹಿಳೆಯರು ಸೇರಿ ನಾಲ್ವರು ವಿದ್ಯಾರ್ಥಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಇವರಲ್ಲಿ ಕನಿಷ್ಠ ಮೂವರ ವೀಸಾ ಅವಧಿ ಮುಗಿದಿದೆ. ಬಂಧಿತರು 22-32 ವರ್ಷದೊಳಗಿನವರು ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                       ಅಮೆರಿಕದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಏಪ್ರಿಲ್ ಮತ್ತು ಜುಲೈನಲ್ಲಿ ವಂಚಕರು ₹ 26 ಲಕ್ಷ ದೋಚಿದ್ದಾರೆ ಎಂದು ವ್ಯಕ್ತಿಯೊಬ್ಬರು ಮುಂಬೈನ ಬಿಕೆಸಿ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ, ಆರೋಪಿಗಳು ಬಳಸಿದ ವೈಫೈ ರೂಟರ್‌ನಿಂದಾಗಿ ಜಾಡು ಹಿಡಿಯಲು ಸಹಕಾರಿಯಾಯಿತು.

                  ಬಂಧಿತರಿಂದ 2ಲಕ್ಷ ಇಮೇಲ್ ಐಡಿ, 1,04,000 ಜನರ ಮೊಬೈಲ್ ಸಂಖ್ಯೆ, 13 ಮೊಬೈಲ್ ಫೋನ್‌, 4 ಲಾಪ್‌ಟಾಪ್‌, ವಿವಿಧ ದೇಶಗಳ ಪಾಸ್‌ಪೋರ್ಟ್‌, 3 ಇಂಟರ್‌ನೆಟ್ ರೂಟರ್‌, ವಿವಿಧ ಬ್ಯಾಂಕ್‌ಗಳ 17 ಚೆಕ್‌ಬುಕ್‌, 115 ಸಿಮ್‌ಕಾರ್ಡ್‌, 40 ನಕಲಿ ರಬ್ಬರ್ ಸ್ಟಾಂಪ್‌, ಕನಿಷ್ಠ 6 ವಿವಿಧ ಬ್ಯಾಂಕ್‌ಗಳ ಖಾತೆಗಳನ್ನು ವಶಪಡಿಸಿಕೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries