ತಿರುವನಂತಪುರಂ: ಕೇರಳದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲು ಕೇಂದ್ರ ಸÀರ್ಕಾರ ಸಜ್ಜಾಗಿದೆ. 40,453 ಕೋಟಿ ಮೌಲ್ಯದ 12 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗುವುದು.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ 403 ಕಿ.ಮೀ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ. ಉದ್ಘಾಟನಾ ಕಾರ್ಯಕ್ರಮವು ಟ್ರಾವಂಕೂರ್ ಇಂಟನ್ರ್ಯಾಷನಲ್ ಕನ್ವೆನ್ಷನ್ ಸೆಂಟರ್, ಕರಿಯಾವಟ್ಟಂ ಸ್ಪೋಟ್ರ್ಸ್ ಹಬ್‍ನಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಹಿಸಲಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ರಾಷ್ಟ್ರೀಯ ಹೆದ್ದಾರಿ ರಾಜ್ಯ ಸಚಿವ ಜನರಲ್ ವಿ. ಕೆ. ಸಿಂಗ್ (ನಿವೃತ್ತ), ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ ಸಚಿವ ಪಿ. ಎ. ಮುಹಮ್ಮದ್ ರಿಯಾಝ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 403 ಕಿಮೀ ಉದ್ದದ ಅಭಿವೃದ್ಧಿ ಯೋಜನೆಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ) ಅನುμÁ್ಠನಗೊಳಿಸುತ್ತಿದೆ.
ಕೇರಳಕ್ಕೆ 40,000 ಕೋಟಿಗಳ 12 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳು; ಇಂದು ಕೇಂದ್ರ ಸಚಿವರಿಂದ ಚಾಲನೆ
0
ಡಿಸೆಂಬರ್ 14, 2022
Tags





