ವಯನಾಡು: ಬಸ್ ಚಾಲನೆ ಮಾಡುವಾಗ ಪಾಶ್ರ್ವವಾಯುವಿಗೆ ತುತ್ತಾದರೂ ಬಸ್ ನಿಲ್ಲಿಸಿ 48 ಪ್ರಯಾಣಿಕರ ಪ್ರಾಣ ಉಳಿಸಿದ ಕೆಎಸ್ ಆರ್ ಟಿಸಿ ಚಾಲಕ ಕೊನೆಗೂ ಸಾವಿಗೆ ಶರಣಾಗಿದ್ದಾರೆ.
ತಾಮರಸ್ಸೆರಿ ಮೂಲದ ಸಿಘೀಶ್ ಕುಮಾರ್ ಮೃತರು. ಸಿಗೀಶ್ ತಾಮರಸ್ಸೆರಿ ಡಿಪೆÇೀದಲ್ಲಿ ಚಾಲಕರಾಗಿದ್ದರು. ಚಿಕಿತ್ಸೆ ವೇಳೆ ಸಾವು ಸಂಭವಿಸಿದೆ.
ಸಿಗೀಶ್ ಅವರು ತಾಮರಸ್ಸೇರಿಯಿಂದ ಮಲಕಪ್ಪಾರಕ್ಕೆ ಕೆಎಸ್‍ಆರ್‍ಟಿಸಿ ಬಸ್‍ನ ಚಾಲಕರಾಗಿದ್ದರು. ಕಳೆದ ತಿಂಗಳು ಪ್ರಯಾಣಿಕನ್ನು ಕರೆದೊಯ್ಯತ್ತಿದ್ದಾಗ ಸಿಗೀಶ್ ಗೆ ಅಸ್ವಸ್ಥತೆ ಅನಿಸಿತು. ನಂತರ ಬಸ್ ರಸ್ತೆಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿದರು. ಬಳಿಕ ಕುಸಿದು ಬಿದ್ದರು. ಸಿಗೀಶ್ ಕುಸಿದು ಬಿದ್ದಿರುವುದು ನಂತರ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಘಟನೆ ತಿಳಿಯಿತು.
ಕುನ್ನುಮ್ಕುಲಂ ತಲುಪಿದಾಗ ಚಾಲಕ ಪಾಶ್ರ್ವವಾಯುವಿಗೆ ಒಳಗಾದರು. ನಂತರ ಬಸ್ಸಿನಲ್ಲಿದ್ದ ಜನರು ಮತ್ತು ಸ್ಥಳೀಯರು ಸಿಗೀಶ್ ಅವರನ್ನು ಕುನ್ನಂಕುಳಂ ತಾಲೂಕು ಆಸ್ಪತ್ರೆಗೆ ದಾಖಲಿಸಿ ನಂತರ ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದರು. ಧೈರ್ಯ ಕಳೆದುಕೊಳ್ಳದೆ ಸಮಯೋಚಿತವಾಗಿ ನಡೆದುಕೊಂಡ ಸಿಗೀಶ್ ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಶ್ಲಾಘಿಸಿದ್ದರು.
ಸಿಗೀಶ್ ಅವರ ಧೈರ್ಯವು ಈ ಹಿಂದೆ ಪ್ರಯಾಣಿಕರ ಜೀವವನ್ನು ಉಳಿಸಿತ್ತು. ಕಳೆದ ಶುಕ್ರವಾರ ಮುನ್ನಾರ್ ನಲ್ಲಿ ಸಿಗೀಶ್ ಚಲಾಯಿಸುತ್ತಿದ್ದ ಬಸ್ ಭೂಕುಸಿತಕ್ಕೆ ಒಳಗಾಗಿತ್ತು. ಭೂಕುಸಿತದಲ್ಲಿ ಬಸ್ಸಿನ ಗಾಜು ಒಡೆದಿದ್ದರೂ ಪ್ರಯಾಣಿಕರನ್ನು ಸುರಕ್ಷಿತವಾಗಿ ತಾಮರಸ್ಸೇರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.
ಕಣ್ಣೀರಿನೊಂದಿಗೆ ಬೀಳ್ಕೊಡುಗೆ; ವಾಹನ ಚಲಾಯಿಸುವಾಗ ಪಾಶ್ರ್ವವಾಯುವಿಗೆ ತುತ್ತಾದರೂ 48 ಜೀವಗಳನ್ನು ಉಳಿಸಿದ ಚಾಲಕ ಸಾವಿಗೆ ಶರಣು
0
ಡಿಸೆಂಬರ್ 15, 2022





