HEALTH TIPS

ಚೀನಾದ ಐಪಿ ವಿಳಾಸಗಳ ಒದಗಿಸುವಂತೆ ಸಿಬಿಐ ಕೋರಿದ ದೆಹಲಿ ಪೊಲೀಸರು

 

             ನವದೆಹಲಿ : ದೆಹಲಿಯ ಏಮ್ಸ್‌ ಆಸ್ಪತ್ರೆಯ ಸರ್ವರ್‌ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಚೀನಾ ಮತ್ತು ಹಾಂಗ್‌ಕಾಂಗ್‌ ಮೂಲದ ಇ-ಮೇಲ್‌ಗಳ ಐಪಿ ವಿಳಾಸಗಳ ಕುರಿತು ಇಂಟರ್‌ಪೋಲ್‌ನಿಂದ ವಿವರಣೆ ಪಡೆಯುವಂತೆ ದೆಹಲಿ ಪೊಲೀಸರು ಸಿಬಿಐಗೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

                 ನವೆಂಬರ್‌ 23ರಂದು ಏಮ್ಸ್‌ ಸರ್ವರ್‌ ಹ್ಯಾಕ್‌ ಮಾಡುವ ಪ್ರಯತ್ನ ನಡೆದಿತ್ತು. ಇದಕ್ಕೆ ಸಂಬಂಧಿಸಿ ಸುಲಿಗೆ ಮತ್ತು ಸೈಬರ್‌ ಭಯೋತ್ಪಾದನೆ ಮೊಕದ್ದಮೆಗಳನ್ನು ದೆಹಲಿ ಪೊಲೀಸ್‌ ಗುಪ್ತಚರ ವಿಭಾಗವು ನವೆಂಬರ್‌ 25ರಂದು ದಾಖಲಿಸಿಕೊಂಡಿತ್ತು. ಚೀನಾ ಮತ್ತು ಹಾಂಗ್‌ಕಾಂಗ್‌ನ ಕೆಲ ಸ್ಥಳಗಳಿಂದ ಸರ್ವರ್‌ ಹ್ಯಾಕ್‌ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

                  ಈ ದಾಳಿಯಿಂದಾಗಿ ಆಸ್ಪತ್ರೆಯ ಹೊರರೋಗಿ ವಿಭಾಗ ಮತ್ತು ಒಳರೋಗಿ ವಿಭಾಗದ ಡಿಜಿಟಲ್‌ ಸೇವೆ ಮೇಲೆ ಅಡ್ಡ ಪರಿಣಾಮ ಉಂಟಾಗಿತ್ತು.

                 ಇಂಟರ್‌ಪೋಲ್‌ ಮಾಹಿತಿಗಳಿಗೆ ಸಿಬಿಐ ನೋಡಲ್‌ ಸಂಸ್ಥೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries