ಕುಂಬಳೆ: ಕಾನ ಶ್ರೀ ಶಂಕರನಾರಾಯಣ ಮಠದ ಜೀರ್ಣೋದ್ಧಾರ ಸಮಿತಿಯ ಆಶ್ರಯದಲ್ಲಿ ಕಾನ ಮಠದ ಭಜಕರ ವಿಶೇಷ ಮಹಾಭೆ ಇತ್ತೀಚೆಗೆ ಬಲಿವಾಡು ಕೂಟದೊಂದಿಗೆ ಶ್ರೀ ಕಾನಮಠದಲ್ಲಿ ನಡೆಯಿತು.
ಕಾನ ಮಠದಲ್ಲಿ ಈ ಹಿಂದೆ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ದೇವರ ಭೂಮಿ ದೇವರ ಹೆಸರಿನಲ್ಲಿ ಮಾಡಿಯೇ ಜೀರ್ಣೋದ್ಧಾರ ಮಾಡಬೇಕು ಎಂಬುದಾಗಿ ಕಂಡು ಬಂದಿರುವುದರಿಂದ ಈ ಬಗ್ಗೆ ಜೀರ್ಣೋದ್ಧಾರ ಸಮಿತಿ ಸಾಕಷ್ಟು ಪ್ರಯತ್ನ ಮಾಡಿದರೂ ಫಲ ಕಂಡುಬಂದಿರದ ಕಾರಣ ಮುಂದಿನ ನಿರ್ವಹಣೆಯ ಬಗ್ಗೆ ಎಲ್ಲಾ ಭಕ್ತ ಜನರ ಅಭಿಪ್ರಾಯ ಪಡೆಯಲು ಮಹಾಸಭೆ ಕರೆಯಲಾಗಿತ್ತು. ಸಭೆಯಲ್ಲಿ ದೇವರ ಭೂಮಿ ದೇವರ ಹೆಸರಲ್ಲಿ ಮಾಡದೆ ಜೀರ್ಣೋದ್ಧಾರ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡಿಬಂತು.
ಈ ಸಂದರ್ಭ ಮೂಡ ಕೋಣಮ್ಮೆ ವೆಂಕಟರಮಣ ಭಟ್ಟ ಅವರು ದೇವರಿಗೆ ಹಿತ ಇದ್ದಲ್ಲಿ ಭಂಡಾರ ಕೊಟ್ಟಗೆ ಸಮೀಪ ಇರುವ ತನ್ನ ಸ್ವಂತ ಭೂಮಿ ಅಗತ್ಯ ಇದ್ದಷ್ಟೂ ನೀಡುತ್ತೇನೆ ಎಂಬ ವಾಗ್ದಾನ ಮಾಡಿದರು. ಮುಂದೆ ದೇವರ ಹಿತ ಏನೆಂಬುದನ್ನು ಪ್ರಶ್ನಾ ಚಿಂತನೆಯಲ್ಲಿ ನಿರ್ಣಯಿಸಿ ಕ್ರಮ ಕೈಗೊಳ್ಳಲು ಮಹಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ತೀರ್ಮಾನಗಳನ್ನು ಮಹಾಪೂಜೆಯ ಬಳಿಕ ಕ್ಷೇತ್ರಾಚಾರ್ಯ ಗುಣಾಜೆ ಈಶ್ವರ ಭಟ್ಟರು ಪ್ರಾರ್ಥನಾ ಪೂರ್ವಕವಾಗಿ ಶಂಕರನಾರಾಯಣ ದೇವರ ಚರಣಾರವಿಂದಗಳಿಗೆ ಸಮರ್ಪಿಸಿದರು. ಜನವರಿ 5 ರಂದು ಪೂರ್ವಾಹ್ನ 8 ರ ಬಳಿಕ ಪ್ರಶ್ನಾ ಚಿಂತನೆ ದೈವಜ್ಞ ಮಂಡೆಕೋಲು ಶಂಕರನಾರಾಯಣ ಕಾರಂತರ ನೇತೃತ್ವದಲ್ಲಿ ನಡೆಯಲಿದ್ದು, ಭಜಕರೆಲ್ಲರೂ ಭಾಗವಹಿಸ ಬೇಕಾಗಿ ವಿನಂತಿಸಲಾಗಿದೆ.
ಶ್ರೀಕಾನ ಮಠದಲ್ಲಿ ವಿಶೇಷ ಮಹಾಸಭೆ
0
ಡಿಸೆಂಬರ್ 30, 2022
Tags




.jpg)
