ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾ ಸಂಘದ ಮಹಾಸಭೆ ಇತ್ತೀಚೆಗೆ ಶ್ರೀಮಂದಿರದಲ್ಲಿ ವೆಂಕಟರಮಣ ಸಿ ಎಚ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ 28ನೇ ವಾರ್ಷಿಕೋತ್ಸವದ ಲೆಕ್ಕಪತ್ರವನ್ನು ಮಂಡಿಸಲಾಯಿತು. ಮಂದಿರದ ಪ್ರಧಾನ ಗುರುಸ್ವಾಮಿ ಕುಂಞÂ್ಞ ಕಣ್ಣ ಮಣಿಯಾಣಿ, ಮಹೇಶ್ ವಳಕುಂಜ, ಮಂಜುನಾಥ ಡಿ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು. ಮುಂದಿನ ಎರಡು ವರ್ಷಕ್ಕೆ ನೂತನ ಸಮಿತಿಯನ್ನು ರೂಪಿಕರಿಸಲಾಯಿತು. ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪೈ ಬದಿಯಡ್ಕ, ಅಧ್ಯಕ್ಷರಾಗಿ ಮಹೇಶ್ ವಳಕುಂಜ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್ ಕಾರ್ಮಾರ್, ಕೋಶಾಧಿಕಾರಿಗಳಾಗಿ ಹರಿಪ್ರಸಾದ್ ಚುಕ್ಕಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು. ಮಂದಿರದ ಗುರುಸ್ವಾಮಿ ಮಧುಸೂದನ ಚುಕ್ಕಿನಡ್ಕ ಸ್ವಾಗತಿಸಿ, ಕೋಶಾಧಿಕಾರಿ ಹರಿಪ್ರಸಾದ್ ಚುಕ್ಕಿನಡ್ಕ ವಂದಿಸಿದರು.
ಚುಕ್ಕಿನಡ್ಕ: ನೂತನ ಸಮಿತಿ ರೂಪಿಕರಣ
0
ಡಿಸೆಂಬರ್ 30, 2022
Tags





