ಕಾಸರಗೋಡು: ರಾಜ್ಯದಲ್ಲಿ ಒಂದನೇ ತರಗತಿಯಿಂದಲೇ ಹಿಂದಿ ಅಧ್ಯಯನ ಆರಂಭಿಸಬೇಕು ಎಂದು ಹಿಂದಿ ಅಧ್ಯಾಪಕರ ಸಂಘದ ಜಿಲ್ಲಾ ಸಮ್ಮೇಳನ ನಿರ್ಣಯದ ಮೂಲಕ ಆಗ್ರಹಿಸಲಾಯಿತು.
ಕಾಸರಗೋಡು ಎ.ಇ.ಓ ಅನೆಕ್ಸ್ ಸಭಾಂಗಣದಲ್ಲಿ ನಡೆದ ಸಮಾರಂಬವನ್ನು ಸಂಘಟನೆಯ ರಾಜ್ಯಾಧ್ಯಕ್ಷ ವಿ. ಜೋಸ್ ಸಮ್ಮೇಳನ ಉದ್ಘಾಟಿಸಿದರು. ಹಿಂದಿ ಶಿಕ್ಷಕರ ಮಂಚ್‍ನ ಜಿಲ್ಲಾಧ್ಯಕ್ಷ ಟಿ. ಎಂ. ವಿ.ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಎನ್. ನಂದಿಕೇಶನ್, ಹಿಂದಿ ಅಧ್ಯಾಪಕರ ಮಂಚ್‍ನ ರಾಜ್ಯ ಉಪಾಧ್ಯಕ್ಷ ವಿನೋದ ಕುರುವಂಬಲಂ, ಕಾರ್ಯದರ್ಶಿ ಕೆ. ಶೈನಿ, ಜಂಟಿ ಕಾರ್ಯದರ್ಶಿ ಪ್ರಶಾಂತ್ ರೈ, ಕೆ. ಸುರೇಶ್, ಜಿ. ಕೆ. ಗಿರೀಶ್ ಮತ್ತು ಟೈಟಸ್ ವಿ. ಥಾಮಸ್ ಉಪಸ್ಥಿತರಿದ್ದರು. ಐದನೇ ತರಗತಿಯಲ್ಲಿ ಹಿಂದಿ ಬೋಧನಾ ಸಮಯವನ್ನು ಎರಡರಿಂದ ಮೂರು ಪೇರಿಯೆಗಳಿಗೆ ಹೆಚ್ಚಿಸಬೇಖು, ಯು.ಎಸ್.ಎಸ್ ಪರೀಕ್ಷೆಯಲ್ಲಿ ಹಿಂದಿ ವಿಷಯವನ್ನು ಸೇರ್ಪಡೆಗೊಳಿಸುಯವಂತೆಯೂ ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭ ಗಣ್ಯವ ಯಕ್ತಿಗಳಿಗೆ ಗೌರವಾರ್ಪಣೆ ನಡೆಯಿತು. ಇ.ಪಿ .ಆನಂದ ಕೃಷ್ಣನ್, ಡಾ. ಧನ್ಯಾ ಶೀಬು, ಡಾ.ಕೆ.ಯು ಕಣ್ಣನ್, ಡಾ. ಎಂ.ಕೆ ರೋಹಿತ್ ಕೃಷ್ಣನ್ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ವಿವಿಧ ಹಿಂದಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಬಾಲಚಂದ್ರನ್ ಸ್ವಾಗತಿಸಿದರು. ಉಪಾಧ್ಯಕ್ಷ ಕೆ. ಸಜಿತ್ ಬಾಬು ವಂದಿಸಿದರು. ಈ ಸಂದರ್ಭ ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಟಿಎಂವಿ ಮುರಳೀಧರನ್ (ಅಧ್ಯಕ್ಷರು), ಟಿ.ವಿ. ಶ್ರೀನಿವಾಸನ್, ಸ್ವಪ್ನಾ ರೈ
(ಉಪಾಧ್ಯಕ್ಷರು), ಪಿ.ಕೆ. ಬಾಲಚಂದ್ರನ್(ಕಾರ್ಯದರ್ಶಿ), ಕೆ. ಸಜಿತ್ ಬಾಬು, ಟೈಟಸ್ ವಿ. ಥಾಮಸ್, ಖದೀಜಾ ಸಾಲಿ (ಜತೆ ಕಾರ್ಯದರ್ಶಿಗಳು), ಕೆ. ಸುರೇಶನ್ (ಕೋಶಾಧಿಕಾರಿ), ಜಿ. ಕೆ. ಗಿರೀಶಿ (ಸಂಚಾಲಕರು, ಅಕಾಡೆಮಿಕ್ ಕೌನ್ಸಿಲ್), ಪಿ. ಹರಿನಾರಾಯಣನ್ (ಸಂಚಾಲಕರು, ಐಟಿ ಸೆಲ್), ಇ.ವಿ. ಆನಂದಕೃಷ್ಣನ್ (ಅತಿಥಿ, ಕಲೆ ಮತ್ತು ಸಂಸ್ಕøತಿ)
ಒಂದನೇ ತರಗತಿಯಿಂದಲೇ ಹಿಂದಿ ಕಲಿಕೆ ಆರಂಭೀಸಬೇಕು: ಹಿಂದಿ ಅಧ್ಯಾಪಕರ ಸಮ್ಮೇಳನ ಆಗ್ರಹ
0
ಡಿಸೆಂಬರ್ 10, 2022
Tags

