HEALTH TIPS

ಸ್ನೇಹಿತೆಯರೇ, ಮದುವೆಯಾದ ಮೇಲೆ ತವರು ಮನೆಯವರ ಜೊತೆ ನಿಮ್ಮ ಸಂಸಾರದ ಗುಟ್ಟು ಹೇಳಲೇಬಾರದು, ಏಕೆ?

 ಮಗಳನ್ನು ಮದುವೆ ಮಾಡಿ ಗಂಡನ ಜೊತೆ ಕಳುಹಿಸಿದ ಮೇಲೆ ಅವಳು ಆ ಮನೆಯಲ್ಲಿ ಹೇಗಿರುತ್ತಾಳೆ ಎಂಬ ಆತಂಕ ಪೋಷಕರಲ್ಲಿರುವುದು ಸಹಜ, ಹಾಗಂತ ಅಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯವನ್ನು ತಿಳಿಯ ಬಯಸುವುದು ಇದೆಯೆಲ್ಲಾ ಅದು ಮಾತ್ರ ದೊಡ್ಡ ತಪ್ಪು!

ಅದರಂತೆ ಮಗಳು ಕೂಡ ಗಂಡನ ಬಗ್ಗೆ, ಗಂಡನ ಮನೆಯವರ ಬಗ್ಗೆ ಚಿಕ್ಕ-ಪುಟ್ಟ ವಿಷಯಗಳನ್ನು ತನ್ನ ತವರು ಮನೆಗೆ ಹೇಳುತ್ತಿದ್ದಾಳೆ ಎಂದಾದರೆ ಅವಳ ಸಂಸಾರವನ್ನು ಅವಳೇ ಕೈಯಾರೆ ಹಾಳು ಮಾಡುತ್ತಿದ್ದಾಳೆ ಎಂಬುವುದರಲ್ಲಿ ನೋ ಡೌಟ್‌.

ಮದುವೆಯಾದ ಮೇಲೆ ಬದಲಾಗುತ್ತೆ ಹೆಣ್ಮಕ್ಕಳ ಬದುಕು

ಹೆಣ್ಮಕ್ಕಳ ಬದುಕು ಮದುವೆಯಾದ ಮೇಲೆ ತುಂಬಾನೇ ಬದಲಾಗುತ್ತೆ. ಇಷ್ಟು ದಿನ ಜವಾಬ್ದಾರಿ ಏನು ಎಂದು ಗೊತ್ತಿಲ್ಲದೆ ರಾಜಕುಮಾರಿಯಾಗಿ ಬೆಳೆದವಳ ಹೆಗಲ ಮೇಲೆ ತುಂಬಾ ಜವಾಬ್ದಾರಿಗಳ ಭಾರ ಇರುತ್ತದೆ, ಮನೆಯ ವಾತಾವರಣದಂತೆ ಬಂದ ಮನೆಯ ವಾತಾವರಣ ಇರಲ್ಲ. ಮನೆಯಲ್ಲಿ ನಾನು ಏನು ಮಾಡಿದರೂ ಸರಿ, ಆದರೆ ಇಲ್ಲಿ ಪರಿಸ್ಥಿತಿ ಸಾಕಷ್ಟು ಬಾರಿ ಬಯಸಿದಂತೆ ಇರಲ್ಲ, ಸಾಕಷ್ಟು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಹೆಣ್ಮಕ್ಕಳಿಗೆ ತುಂಬಾನೇ ಕಷ್ಟವಾಗುವುದು. ಹಾಗಂತ ಆ ವಿಷಯಗಳೆನ್ನೆಲ್ಲಾ ತನ್ನಮನೆಯವರ ಬಳಿ ಹೇಳುತ್ತಿದ್ದರೆ ನಿಮಗೆ ಗಂಡನ ಮನೆ, ಆ ಪರಿಸರ ಮತ್ತಷ್ಟು ಹಿಂಸೆ ಅನಿಸಲಾರಂಭಿಸುತ್ತದೆ.

ಮನೆಯವರ ಮಾತುಗಳನ್ನೂ ಕೇಳುತ್ತಾ-ಕೇಳುತ್ತಾ ಗಂಡನ ಮನೆಯಲ್ಲಿ ತಪ್ಪುಗಳೇ ಕಾಣಿಸಬಹುದು

ಮಗಳು ತಾಯಿಗೆ ಫೋನ್ ಮಾಡಿ ಅಮ್ಮಾ... ಇಲ್ಲಿ ಅತ್ತೆ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಅಥವಾ ಈ ಮನೆಯಲ್ಲಿ ಅಲ್ಲಿದ್ದ ಸೌಕರ್ಯಗಳಿಲ್ಲ ಅಥವಾ ಇಲ್ಲಿ ಕೆಲಸ ಜಾಸ್ತಿ ಅಂತೆಲ್ಲಾ ಹೇಳಲಾರಂಭಿಸಿದರೆ ಆ ಹೆತ್ತ ಕರಳು ಅಯ್ಯೋ ನನ್ನ ಮಗಳು ಕಷ್ಟಪಡುತ್ತಿದ್ದಾಳೆ ಎಂದು ಒದ್ದಾಡಿ ಬಿಡುತ್ತೆ.

ನನ್ನ ಮಗಳು ಮದುವೆ ಮಾಡಿಕೊಟ್ಟ ಮನೆಯಲ್ಲಿ ಖುಷಿಯಾಗಿಲ್ಲ ಎಂದು ಕೊರೊಗುವುದು ಮಾತ್ರವಲ್ಲ ಅವಳಿಗೆ ಕೆಲವೊಂದು ಟಿಪ್ಸ್ ನೀಡಬಹುದು, ಅಂದರೆ ಅತ್ತೆ ಮನೆಯಲ್ಲಿ ಕಷ್ಟವಾದರೆ ನೀವಿಬ್ಬರು ಬೇರೆ ಮನೆ ಮಾಡಿ ಹೋಗಿ ಅಥವಾ ಅಷ್ಟು ಕಷ್ಟವಾದರೆ ನಮ್ಮ ಮನೆಗೆ ಬಾ, ನಮಗೆ ನೀನೇನೂ ಹೆಚ್ಚಲ್ಲ, ನಾವು ಸಾಕುತ್ತೇವೆ ಎಂದೆಲ್ಲಾ ಹೇಳುತ್ತಾರೆ.

ಈ ಮಾತುಗಳನ್ನು ಕೇಳುವಾಗ ಅವಳಿಗೆ ತಾನು ಮಾಡುತ್ತಿರುವುದು ಸರಿಯಾಗಿಯೇ ಇದೆ ಎಂದು ಅನಿಸಲಾರಂಭಿಸುವುದು. ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಜಗಳ ಮಾಡಿ ತವರು ಮನೆಗೆ ಹೋಗುವುದು ಅಥವಾ ಚಿಕ್ಕ ಪುಟ್ಟ ಜಗಳಕ್ಕೆ ತವರು ಮನೆಯವರು ಮೂಗು ತೂರಿಸುವುದು ಮಾಡಬಹುದು.

ತವರು ಮನೆಯವರು ಮೂಗು ತೂರಿಸಿದರೆ ಮಗಳ ಸಂಸಾರದಲ್ಲಿ ಹೆಚ್ಚುವುದು ಅಂತರ

ಯಾವಾಗ ಪತ್ನಿಯ ತವರು ಮನೆಯವರು ನಮ್ಮ ಮನೆಯ ವಿಷಯದಲ್ಲಿ ಅಗ್ಯತಕ್ಕಿಂತ ಹೆಚ್ಚಾಗಿ ಮೂಗು ತೂರಿಸುತ್ತಿದ್ದಾರೆ ಎಂದನಿಸುವುದೋ ಆಗ ಗಂಡನಿಗೂ ತುಂಬಾ ಹಿಂಸೆ ಅನಿಸಲಾರಂಭಿಸುತ್ತದೆ, ಈ ಕಾರಣಕ್ಕೆ ಇಬ್ಬರ ನಡುವೆ ಜಗಳ ಮತ್ತಷ್ಟು ಹೆಚ್ಚಾಗಬಹುದು. ನಮ್ಮ ವಿಷಯವೆಲ್ಲಾ ಅವರಿಗೇಕೆ ಹೇಳುತ್ತಿದ್ದೀಯಾ ಎಂದು ಇವನ ಹಾಗೂ ಇವನ ಮನೆಯವರ ಕೋಪ ಮತ್ತಷ್ಟು ಹೆಚ್ಚಾಗುವುದು.

ತವರು ಮನೆಯವರ ಬಳಿ ಹೇಳುವುದರಿಂದ ನಿಮ್ಮ ಮನೆಯ ಮರ್ಯಾದೆ ನೀವೇ ತೆಗೆದಂತೆ

ಎಲ್ಲಾ ಮನೆಯ ದೋಸೆನೂ ತೂತೆ ಎಂಬ ಗಾದೆ ಮಾತಿನಂತೆ ಎಲ್ಲಾ ಮನೆಯಲ್ಲೂ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ, ಸಮಸ್ಯೆಯಿಲ್ಲದ ಮನೆಯಿರಲ್ಲ, ಆದ್ದರಿಂದ ನಿಮ್ಮ ಮನೆಯ ಸಮಸ್ಯೆ ನೀವೇ ಬಗೆಹರಿಸಲು ಪ್ರಯತ್ನಿಸಬೇಕು, ಚಿಕ್ಕ-ಪುಟ್ಟ ವಿಷಯಗಳನ್ನು ತವರು ಮನೆಯವರ ಜೊತೆ ಹೇಳುವುದರಿಂದ ನಿಮ್ಮ ಮನೆಯವರ ಮರ್ಯಾದೆ ನೀವೇ ತೆಗೆದಂತೆ, ಆದ್ದರಿಂದ ಎಲ್ಲಾ ವಿಷಯಗಳನ್ನು ತವರು ಮನೆಯವರ ಜೊತೆ ಹೇಳಿಕೊಳ್ಳುವ ಮುನ್ನ ಈ ವಿಷಯಗಳನ್ನೆಲ್ಲಾ ಅವರ ಬಳಿ ಹೇಳಬೇಕಾ ಅಥವಾ ನಾನೇ ಡೀಲ್‌ ಮಾಡಬಹುದೇ ಎಂದು ಯೋಚಿಸುವುದು ಒಳ್ಳೆಯದು, ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ನೀವೇ ಬಗೆಹರಿಸಬಹುದು.

ಮದುವೆಯಾದ ಮೇಲೆ ತವರು ಮನೆಗೆ ಹೆಚ್ಚು ಕಾಲ್‌ ಮಾಡದಿರುವುದೇ ಒಳ್ಳೆಯದು

ಕಾಲ್ ಮಾಡಿ ಅವರು ಹೇಗಿದ್ದಾರೆ ಎಂದೆಲ್ಲಾ ವಿಚಾರಿಸುವುದು, ಅವರು ನಿಮ್ಮ ಯೋಗಾಕ್ಷೇಮ ವಿಚಾರಿಸುವುದು ತಪ್ಪಲ್ಲ, ಆದರೆ ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಚಿಕ್ಕ ಪುಟ್ಟ ಜಗಳ, ದುಡ್ಡಿನ ವಿಷಯ, ನಿಮ್ಮ ಸಮಸ್ಯೆಗಳು ಯಾವುದನ್ನೂ ಅವರ ಬಳಿ ಹೇಳದಿರುವುದು ಒಳ್ಳೆಯದು, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಿ, ಆದರೆ ಕಂಪ್ಲೇಂಟ್‌ ಮಾಡುವುದು ಮಾಡಬೇಡಿ.

ಹಾಗಂತ ಪ್ರತಿಯೊಂದು ವಿಷಯ ಬಚ್ಚಿಡಲೂ ಹೋಗಬೇಡಿ

ಹೇಗೆ ಚಿಕ್ಕ ಪುಟ್ಟ ವಿಷಯಗಳನ್ನು ಹೇಳುವುದನ್ನು ಮಾಡಬಾರದೋ ಅದೇ ರೀತಿ ಏನೂ ಹೇಳದೇ ಇರುವುದು ಕೂಡ ತಪ್ಪು, ಕೆಲವರಿಗೆ ಗಂಡನ ಮನೆಯಲ್ಲಿ ತುಂಬಾ ಕಿರುಕುಳ, ಹಿಂಸೆ ಕೊಡುತ್ತಿರುತ್ತಾರೆ ಇಂಥ ವಿಚಾರಗಳನ್ನೂ ಬಚ್ಚಿಡಬಾರದು. ಕೆಲವೊಂದು ವಿಚಾರಗಳನ್ನು ಮನೆಯವರು ಅಥವಾ ಸ್ನೇಹಿತರ ಬಳಿ ಹೇಳಿಕೊಂಡರೆ ನಿಮ್ಮ ಮನಸ್ಸಿಗೆ ಸಮಧಾನವಾಗುವುದು ಅಲ್ಲದೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅವರ ಬೆಂಬಲೂ ಸಿಗುವುದು.

ಆದ್ದರಿಂದ ಸಂಬಂಧ ಕಾಪಾಡಲು ನಾವು ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು, ಏನಂತೀರಿ?


 

 

 

 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries