ಪೆರ್ಲ:ಆಕಸ್ಮಿಕವಾಗಿ ವಿದ್ಯುತ್ ಅಪಘಾತಕ್ಕೊಳಗಾಗಿ ಮೃತಪಟ್ಟ ಎಣ್ಮಕಜೆ ಗ್ರಾಮ 1ನೇ ವಾರ್ಡಿನ ಸಾಯ ಬಳಿಯ ಗುಳಿಗಮೂಲೆ ನಿವಾಸಿ ಜಿತೇಶ್ ನ ಮನೆಗೆ ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಭೇಟಿಯಿತ್ತು ಸಾಂತ್ವನ ನುಡಿದರು.
ಆರ್ಥಿಕವಾಗಿ ಸಬಲರಲ್ಲದ ಈ ಕುಟುಂಬಕ್ಕೆ ಏಕ ಮಾತ್ರ ಭರವಸೆಯಾಗಿದ್ದ ಪುತ್ರನನ್ನು ಕಳಕೊಂಡಿರುವುದಲ್ಲದೆ ಈ ಹಿಂದೆ ಈತನ ಸಹೋದರಿಯನ್ನು ಇನ್ನೊಂದು ದುರ್ಘಟನೆಯಲ್ಲಿ ಕಳಕೊಂಡಿರುವ ಬಗ್ಗೆ ತಿಳಿದುಕೊಂಡ ಶಾಸಕರು ಈ ಬಡ ಕುಟುಂಬಕ್ಕೆ ಧನ ಸಹಾಯ ನೀಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ತಿಳಿಸಿದರು. ಕುಟುಂಬ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ನಾರಾಯಣ ನಾಯ್ಕ್, ಪದ್ಮಾವತಿ ದಂಪತಿಗಳನ್ನು ಸಂತೈಸಿದರು. ಈ ಸಂದರ್ಭದಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಗ್ರಾ.ಪಂ.ಮಾಜಿ ಸದಸ್ಯ ಐತ್ತಪ್ಪ ಕುಲಾಲ್, ಯುಡಿಎಫ್ ನೇತಾರರು ಶಾಸಕರ ಜತೆಗಿದ್ದರು.




.jpg)
.jpg)
