ಬದಿಯಡ್ಕ: ಕೇರಳ ಆಡಳಿತ ನಡೆಸುತ್ತಿರುವ ಎಲ್.ಡಿ.ಎಫ್ ಸರ್ಕಾರ ಎಲ್ಲ ರಂಗದಲ್ಲೂ ಸಂಪೂರ್ಣ ವಿಫಲವಾಗಿದೆ. ಬೆಲೆ ಏರಿಕೆ, ಕೃಷಿ ಉತ್ಪನ್ನಗಳ ಬೆಲೆ ಇಳಿಕೆಗಳಿಂದ ಕೇರಳದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಆರೋಪಿಸಿದರು.
ರಾಜ್ಯ ಸರ್ಕಾರದ ಜನದ್ರೋಹ ನೀತಿಗೆ ಎದುರಾಗಿ ಕಾರಡ್ಕ ಬ್ಲಾಕ್ ಕಾಂಗ್ರೆಸ್ಸ್ ಆಯೋಜಿಸಿದ ವಾಹನ ಪ್ರಚಾರ ಜಾಥಾಕ್ಕೆ ನೀರ್ಚಾಲಲ್ಲಿ ಜಾಥಾ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾರಿಜಾಕ್ಷನ್ ಗೆ ಪಕ್ಷದ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿ ಮಾತನಾಡಿದರು.
ಡಿಸಿಸಿ ಅಧ್ಯಕ್ಷ ಪಿ.P.É ಫೈಸಲ್, ಕೆಪಿಸಿಸಿ ಸದಸ್ಯ ನೀಲಕಂಠನ್, ಕಾರ್ಯದರ್ಶಿ ಕುಂಞ ಕಣ್ಣನ್, ಡಿಸಿಸಿ ಸದಸ್ಯರಾದ ಮಂಜುನಾಥ ಆಳ್ವ ಮಡ್ವ, ಪಿ.ಜಿ. ಚಂದ್ರಹಾಸ ರೈ, ಮಂಡಲ ಅಧ್ಯಕ್ಷ ಎಂ. ನಾರಾಯಣ ಮಣಿಯಾಣಿ, ಆನಂದ ಮವ್ವಾರು ಮಾತನಾಡಿದರು.
ಮುಖಂಡರಾದ ಜಗನ್ನಾಥ ರೈ, ಖಾದರ್ ಮಾನ್ಯ, ತಿರುಪತಿಕುಮಾರ್ ಭಟ್, ಅಬ್ಬಾಸ್ ಎಂ, ಶ್ಯಾಮ್ ಪ್ರಸಾದ್ ಮಾನ್ಯ, ಗಂಗಾಧರ ಗೊಳಿಯಡ್ಕ, ಶಾಫಿ ಗೋಳಿಯಡ್ಕ, ಶ್ರಿಧÀರ್ ಅಯರ್ಕಾಡ್, ಬಲರಾಮ ನಾಯರ್, ಚಂದ್ರಹಾಸ ಭಟ್, ಚಂದ್ರಹಾಸ ಮಾಸ್ತರ್, ರಾಮ ಪಟ್ಟಾಜೆ, ಕೃಷ್ಣ ಕುಮಾರ್ ನೇತೃತ್ವ ನೀಡಿದರು. ಕನ್ನೆಪ್ಪಾಡಿ, ಬದಿಯಡ್ಕ , ಕುಂಬ್ಡಾಜೆ, ಬೆಳ್ಳೂರು ಮೊದಲಾದೆಡೆ ವಾಹನ ಪ್ರಚಾರ ಜಾಥಾ ನಡೆಯಿತು. ಮುಳ್ಳೇರಿಯದಲ್ಲಿ ಸಮಾರೋಪಗೊಂಡಿತು.
ಎಲ್ಲಾ ಕ್ಷೇತ್ರದಲ್ಲಿ ಕೇರಳ ಸರ್ಕಾರ ವಿಫಲ: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್
0
ಡಿಸೆಂಬರ್ 01, 2022
Tags




.jpg)
